Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಗುಜರಾತನಲ್ಲಿ ತೂಗುಸೇತುವೆ ಕುಸಿದು 150ಕ್ಕೂ ಹೆಚ್ಚು ಜನ ನೀರು ಪಾಲು


ಗಾಂಧಿನಗರ:  ತೂಗು ಸೇತುವೆ ಕುಸಿದು ಬಿದ್ದು ನೂರಾರು ಜನರು ನೀರು ಪಾಲಾದ ಘಟನೆ ಗುಜರಾತಿನ ಮೊರ್ಬಿ ನಗರದಲ್ಲಿ ರವಿವಾರ ಸಂಜೆ ಜರುಗಿದೆ.

60ಕ್ಕೂ ಹೆಚ್ಚು ಜನರ ಶವ ಸಿಕ್ಕಿದ್ದು, ಸೇತುವೆ ಮೇಲೆ ನಿಂತಿದ್ದ ನೂರಾರು ನದಿಗೆ ಬಿದ್ದಿದ್ದಾರೆ.

ಇಲ್ಲಿನ ಮೊರ್ಬಿ ಪ್ರದೇಶದಲ್ಲಿ ಮಚ್ಚೂ ನದಿಗೆ ಅಡ್ಡಲಾಗಿ ಹಾಕಿರುವ ತೂಗುಸೇತುವೆ ಮುರಿದು ಬಿದ್ದಿದ್ದು, 60 ಮಂದಿ ಸಾವಿಗೀಡಾಗಿದ್ದಾರೆ ಎಂದು ಪಂಚಾಯತ್ ರಾಜ್ ಸಚಿವ ಮೀರ್ಜಾ ತಿಳಿಸಿದ್ದಾರೆ . ಅಲ್ಲದೇ ಹಲವರು ನೀರಿನಲ್ಲಿ ಮುಳುಗಿರುವ ಸಾಧ್ಯತೆ ಇದ್ದು, ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕೇಬಲ್ ಬ್ರಿಡ್ಜ್ ಮೇಲೆ 150ಕ್ಕೂ ಹೆಚ್ಚು ಮಂದಿ ಇದ್ದಾಗ ಸಂಜೆ ಸುಮಾರು 6.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕೂಡಲೇ ಪ್ರಧಾನಿ ಮೋದಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರಿಂದ, ಘಟನೆ ಸಂಭವಿಸಿದ ನಂತರ ತುರ್ತು ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ಸ್ಥಳಕ್ಕೆ ಕಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ​ ಸಾಂಘ್ವಿ ತಿಳಿಸಿದ್ದಾರೆ.

60 ಮಂದಿ ಸಾವಿಗೀಡಾಗಿದ್ದಾರೆ ಎಂದು ಸಚಿವರು ತಿಳಿಸಿದರು. , ಮೃತಪಡುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈ ಮಧ್ಯೆ ಗುಜರಾತ್ ಸರ್ಕಾರ ಪರಿಹಾರವನ್ನು ಘೋಷಿಸಿದೆ. ಮೃತಪಟ್ಟವರ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ನೀಡುವುದಾಗಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.

ರಾಜ್ಯಕ್ಕೆ ಮೂರು ದಿನದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.


A B Dharwadkar
the authorA B Dharwadkar

Leave a Reply