Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಹೆಲಿಕಾಪ್ಟರ್ ಸದ್ದಿಗೆ ಎಮ್ಮೆ ಸಾವು : ಪೊಲೀಸರಿಗೆ ದೂರು


ಜೈಪುರ : ಮನೆಯ ಮೇಲೆ ಹೆಲಿಕಾಪ್ಟರ್ ಹಾರಿದಾಗ ಸದ್ದಿಗೆ ಕೊಟ್ಟಿಗೆಯಲ್ಲಿದ್ದ ಎಮ್ಮೆ ಶಬ್ದಕ್ಕೆ ಹೆದರಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದೆ ಎಂದು ಪರಿಹಾರ ಕೊಡಿಸಬೇಕು ಎಂದು ಎಮ್ಮೆ ಮಾಲೀಕ ಆಗ್ರಹಿಸಿದ್ದ ಘಟನೆ ಬೆಹ್ರೋರ​ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದಲ್ಲಿ ಪುಷ್ಪವೃಷ್ಟಿಗೆಂದು 10 ಮೀಟರ್​ ಎತ್ತರದಲ್ಲಿ ಹೆಲಿಕಾಪ್ಟರ್​ ಹಾರಿಸಲಾಗಿದೆ. ಇಷ್ಟು ಕಡಿಮೆ ಎತ್ತರದಲ್ಲಿ ಹಾರಿಸಿದ್ದಕ್ಕೆ ದೊಡ್ಡ ಸದ್ದಿನಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಎಮ್ಮೆ ಪ್ರಾಣ ಕಳೆದುಕೊಂಡಿದೆ.

ಇದಕ್ಕೆ ಪೈಲಟ್​ ನಿರ್ಲಕ್ಷ್ಯವೇ ಕಾರಣವಾಗಿದೆ. ಎಮ್ಮೆಯನ್ನು ಕೊಡಿಸಿ ಇಲ್ಲವೇ, ಹಣ ನೀಡಿ ಎಂದು ರೈತ ಬೇಡಿಕೆ ಇಟ್ಟಿದ್ದಾನೆ.

ಈ ಬಗ್ಗೆ ದೂರು ಪಡೆದಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಎಮ್ಮೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ. ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


A B Dharwadkar
the authorA B Dharwadkar

Leave a Reply