This is the title of the web page

ಮರಾಠಿ ಬೋರ್ಡ ಮೇಲೆ ಬುಲ್ಡೋಜರ್ ಅಬ್ಬರ; ಕನ್ನಡಿಗರ ಹೋರಾಟಕ್ಕೆ ಮಣಿದ ಅಧಿಕಾರಿಗಳು 

ಬೆಳಗಾವಿ, ೧೭-  ಕರ್ನಾಟಕದ ನೆಲದಲ್ಲಿ ಮಹಾರಾಷ್ಟ್ರ ಸರ್ಕಾರದ ಲೋಕೋಪಯೋಗಿ ಇಲಾಖೆ ಬರೆಸಿದ್ದ ಮರಾಠಿ ನಾಮಫಲಕದ ಕಟ್ಟೆಯನ್ನು ತೆರವುಗೊಳಿಸಲಾಗಿದೆ.

ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಗಡಹಿಂಗ್ಲಜ ರಸ್ತೆಯ ಸೇತುವೆ ಬಳಿ ಮಹಾರಾಷ್ಟ್ರ ದ ಲೋಕೋಪಯೋಗಿ ಇಲಾಖೆ ಗೋಡೆ ಕಟ್ಟಿ ಅದರ ಮೇಲೆ ಮರಾಠಿ ಭಾಷೆಯಲ್ಲಿ ಮಹಾರಾಷ್ಟ್ರ ಶಾಸನ ಎಂದು ಬರೆಯಲಾಗಿತ್ತು.

ಕರ್ನಾಟಕ ರಾಜ್ಯದ ಮೂರು ಕಿಲೋ ಮೀಟರ್ ಒಳಗೆ ಮಹಾರಾಷ್ಟ್ರದ ಮಹಾರಾಷ್ಟ್ರ ಶಾಸನ ಎಂಬ ನಾಮಫಲಕವನ್ನು ಅಳವಡಿಸಿದರೂ ಗಮನ ಹರಿಸದ ರಾಜ್ಯದ ಪೋಲಿಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.

ಸ್ಥಳಕ್ಕೆ ಆಗಮಿಸಿದ ಸಂಕೇಶ್ವರ ಪೋಲಿಸರು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜೆಸಿಬಿ ಸಹಾಯದಿಂದ ನಾಮ ಫಲಕ ಒಡೆದು ತೆರವುಗೊಳಿಸಿದರು.

 

You might also like
Leave a comment