Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

State News

ವಿಮಾನ ದರದಷ್ಟು ದರ ಹೆಚ್ಚಿಸಿ ಸುಲಿಗೆ ಮಾಡುತ್ತಿರುವ ಖಾಸಗಿ ಬಸ್ ಮಾಲೀಕರು


ಬೆಂಗಳೂರು: ಅಕ್ಟೋಬರ 22 ರಿಂದ ದೀಪಾವಳಿ ಹಬ್ಬಕ್ಕೆ ಐದು ದಿನ ರಜೆ ಇದ್ದು, ಹೆಚ್ಚಿನ ಸಂಖ್ಯೆಯ ಜನರು ತಮ್ಮ ತಮ್ಮ ಊರುಗಳಿಗೆ ಹೋಗುತ್ತಾರೆ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಕೆಲವು ಖಾಸಗಿ ಬಸ್ ಗಳು ಪ್ರತಿ ಬಾರಿಯಂತೆ ಈ ಬಾರಿಯೂ ಟಿಕೆಟ್ ದರವನ್ನು ಭಾರಿ ಏರಿಕೆ ಮಾಡಿ, ರಾಜಾರೋಷವಾಗಿ ಹಗಲು ದರೋಡೆ ನಡೆಸಿವೆ.

ಹಬ್ಬಗಳ ರಾಜ ದೀಪಾವಳಿಗೆ ಬಸ್ ದರ ಎಷ್ಟೇ ದುಬಾರಿಯಾದರೂ ಜನರು ತಮ್ಮ ತಮ್ಮ ಊರುಗಳಿಗೆ ಹೋಗೇ ಹೋಗುತ್ತಾರೆಂದು ಗೊತ್ತಿದ್ದು “ಗಾಳಿ ಬಂದಾಗ ತೂರಿಕೋ” ಎನ್ನುವಂತೆ ಹಲವು ಪಟ್ಟು ಲಾಭ ಗಳಿಕೆಯಲ್ಲಿ ತೊಡಗಿದ್ದಾರೆ.

ಕೆಲವು ಖಾಸಗಿ ಬಸ್ ಗಳು ವಿಮಾನದಷ್ಟೇ ದುಬಾರಿ ಟಿಕೆಟ್ ದರ ಹೆಚ್ಚಳ ಮಾಡಿವೆ. ಅಕ್ಟೋಬರ 21ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಖಾಸಗಿ ಟ್ರಾವೆಲ್ಸ್ ವೊಂದರ ಟಿಕೆಟ್ ದರ 5,500 ರೂ. ನಿಗದಿಪಡಿಸಲಾಗಿದೆ. ವಿಮಾನ ಟಿಕೆಟ್ ದರ 5, 600 ರೂ.ನಿಂದ 6000 ರೂ. ಇದೆ.

ಬೆಂಗಳೂರಿನಿಂದ ಮಂಗಳೂರಿಗೆ 3,600 ರೂ. ಬಸ್ ಟಿಕೆಟ್ ದರ ಇದ್ದು, ವಿಮಾನ ದರ 3700 ರೂ. ಇದೆ. ಖಾಸಗಿ ಬಸ್ ಗಳಲ್ಲಿ ಟಿಕೆಟ್ ದರವನ್ನು ಭಾರಿ ಏರಿಕೆ ಮಾಡಿರುವುದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾಮಾನ್ಯವಾಗಿ ಹಬ್ಬದಿನಗಳಲ್ಲಿ ಬಸ್‌ ದರ ಹೆಚ್ಚಳವಾಗುತ್ತದೆ. ಆದರೆ ಈ ಬಾರಿ ಹಬ್ಬದ ದಿನದಲ್ಲಿ ಸರ್ಕಾರಿ ಬಸ್‌ ಗಳು ಸೇರಿ ಯಾವುದೇ ಬಸ್‌ ಗಳ ಪ್ರಯಾಣ ದರ ಹೆಚ್ಚಿಸದಂತೆ ಸಚಿವ ಶ್ರೀರಾಮುಲು ಎಚ್ಚರಿಕೆ ನೀಡಿದ್ದರು. ಆದರೆ ಸರ್ಕಾರದ ಮಾತಿಗೆ ಖಾಸಗಿ ಬಸ್ ಮಾಲೀಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರಕ್ಕೆ ಇವರ ಮೇಲೆ ನಿಯಂತ್ರಣವೇ ಇಲ್ಲದಂತಾಗಿದೆ.


A B Dharwadkar
the authorA B Dharwadkar

Leave a Reply