This is the title of the web page

ನಕಲಿ ಆರ್ ಟಿಪಿಸಿಆರ್ ಸರ್ಟಿಫಿಕೇಟ್ ಪಡೆದು ರಾಜ್ಯ ಪ್ರವೇಶಿಸುತ್ತಿದ್ದ 12 ಪ್ರಯಾಣಿಕರ ವಿರುದ್ಧ ಕೇಸ್

ಬೆಳಗಾವಿ, 4- ಮಹಾರಾಷ್ಟ್ರದಲ್ಲಿ ನಕಲಿ ಆರ್ ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೇಟ್ ಪಡೆದು ಕರ್ನಾಟಕಕ್ಕೆ ಬರಲು ಯತ್ನಿಸಿದ 12 ಜನರ ವಿರುದ್ಧ ನಿಪ್ಪಾಣಿ ಗ್ರಾಮೀಣ ಪೊಲೀಸರು ದೂರು ದಾಖಲಿಸಿದ್ದು, ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರು 72 ತಾಸುಗಳಿಗೆ ಕಡಿಮೆಯಿಲ್ಲದಂತೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿ ಪಡೆದಿರಬೇಕು. ಆದರೆ ಮಹಾರಾಷ್ಟ್ರದಿಂದ ನಿಪ್ಪಾಣಿ ಮೂಲಕ ರಾಜ್ಯ ಪ್ರವೇಶಿಸಲಿದ್ದ ಖಾಸಗಿ ಬಸ್ಸಿನಲ್ಲಿ 12 ಪ್ರಯಾಣಿಕರು ಹೊಂದಿದ್ದ ಸರ್ಟಿಫಿಕೇಟ್ ನಕಲಿಯಾಗಿದ್ದವು. ವಿಚಾರಣೆಯಲ್ಲಿ ತಾವು ಕೊಲ್ಹಾಪುರ್ ನಲ್ಲಿ ಅವುಗಳನ್ನು ಪಡೆದಿರುವದಾಗಿ ತಿಳಿಸಿದರು.

ಈಗ ಕರ್ನಾಟಕ ಪೊಲೀಸರು ಕೊಲ್ಹಾಪುರದಲ್ಲಿ ನಡೆಯುತ್ವಿರುವ ನಕಲಿ ಸರ್ಟಿಫಿಕೇಟ್ ದಂಧೆಗಳ ಪತ್ತೆಯಲ್ಲಿ ತೊಡಗಿದ್ದಾರೆ.

You might also like
Leave a comment