This is the title of the web page

ರಶಿಯಾದಿಂದ ಕದನ ವಿರಾಮ

ಮಾಸ್ಕೊ, 5:- ಕಳೆದ 10 ದಿನಗಳಿಂದ ಉಕ್ರೇನ್ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ರಶಿಯಾ ಶನಿವಾರ ಕದನ ವಿರಾಮ ಘೋಷಿಸಿದೆ.

ಉಕ್ರೇನ್ ನೆಲದಲ್ಲಿ ಸಿಲುಕಿರುವ ಬೇರೆ ರಾಷ್ಟ್ರಗಳ ಪ್ರಜೆಗಳು ಮತ್ತು ಉಕ್ರೇನ್ ನಾಗರಿಕರ ಸ್ಥಳಾಂತರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕದನ ವಿರಾಮವನ್ನು ಘೋಷಿಸಲಾಗಿದೆ.

ಉಕ್ರೇನ್‌ನ ಮರಿಯಾಪೋಲ್ ಮತ್ತು ವೊಲ್ನೋವಾಖಾ ಪ್ರದೇಶದಿಂದ ನಾಗರಿಕರನ್ನು ಸ್ಥಳಾಂತರಿಸಲು ಅವಕಾಶ ನೀಡುವುದಕ್ಕಾಗಿ ಮಾಸ್ಕೋ ಸಮಯದ ಪ್ರಕಾರ ಬೆಳಿಗ್ಗೆ 10 ಗಂಟೆಗೆ ರಶಿಯಾ ಕದನ ವಿರಾಮ ಘೋಷಿಸಿದೆ.

ಭಾರತೀಯ ಕಾಲಾವಧಿ ಪ್ರಕಾರ ಬೆಳಗ್ಗೆ 11.30ರಿಂದ ಕದನ ವಿರಾಮ ಘೋಷಿಸಲಾಗಿದೆ. ಇದನ್ನು ಉಕ್ರೇನ್ ಕಾಲಮಾನದಲ್ಲಿ ನೋಡುವುದಾದರೆ ಬೆಳಗ್ಗೆ 6 ಗಂಟೆ ಆಗಿರುತ್ತದೆ. ಕದನ ವಿರಾಮದ ಬಗ್ಗೆ ರಷ್ಯಾ ವಿದೇಶಾಂಗ ಸಚಿವಾಲಯವು ಮಾಹಿತಿ ನೀಡಿದೆ.

ವ್ಲಾದಿಮಿರ್ ಪುತಿನ್ ಪಡೆ ನಡೆಸುತ್ತಿರುವ ವೈಮಾನಿಕ ದಾಳಿಗೆ ಉಕ್ರೇನ್ ನೆಲದಲ್ಲಿ ನರಕಸದೃಶ್ಯ ಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್‌ನ ಮೇಲೆ ಪೂರ್ಣ ಪ್ರಮಾಣದ ಆಕ್ರಮಣ ಪ್ರಾರಂಭವಾದ ನಂತರ ಕಳೆದ ಒಂದೇ ವಾರದಲ್ಲಿ ರಷ್ಯಾ ಪಡೆಯು 500ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ತಿಳಿದು ಬಂದಿದೆ.

You might also like
Leave a comment