This is the title of the web page

5ಜಿ ತರಂಗಾಂತರಗಳ ಹರಾಜಿಗೆ ಕೇಂದ್ರ ಸರ್ಕಾರ ಅನುಮೋದನೆ

 

ಹೊಸದಿಲ್ಲಿ, ೧೫- : ದೇಶದಲ್ಲಿ ಸೇವೆಗಳನ್ನು ಒದಗಿಸಲು ದೊಡ್ಡ ಹೆಜ್ಜೆಯಾಗಿ 5ಜಿ ತರಂಗಾಂತರಗಳ ಹರಾಜಿಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಇತರ ಪ್ರಮುಖ ಕಾರ್ಯಕ್ರಮಗಳ ಮೂಲಕ ಡಿಜಿಟಲ್ ಸಂಪರ್ಕವು ಸರ್ಕಾರದ ನೀತಿ ಉಪಕ್ರಮಗಳ ಪ್ರಮುಖ ಭಾಗವಾಗಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಇದಕ್ಕೆ 5ಜಿ ಬಹುಮುಖ್ಯ ಅಂಗವಾಗಿದೆ ಎಂದಿದ್ದಾರೆ.

ಮೊಬೈಲ್ ಬ್ರಾಡಬ್ಯಾಂಡ ನಾಗರಿಕರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. 2015ರಿಂದ ದೇಶಾದ್ಯಂತ ೪ ಜಿ ಸೇವೆಗಳ ತ್ವರಿತ ವಿಸ್ತರಣೆಯ ಮೂಲಕ ಇದು ದೊಡ್ಡ ಉತ್ತೇಜನವನ್ನು ಪಡೆಯಿತು. ಇಂದು 80 ಕೋಟಿ ಚಂದಾದಾರರು ಬ್ರಾಡಬ್ಯಾಂಡಗೆ ಪ್ರವೇಶವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

You might also like
Leave a comment