This is the title of the web page

ಜಿಲ್ಲಾಧಿಕಾರಿ ಮನೆ ಆವರಣದಲ್ಲಿದ್ದ ಗಂಧದ ಮರ ಕದ್ದ ಚಾಲಾಕಿ ಕಳ್ಳರು!

ಧಾರವಾಡ, 22- ಇಲ್ಲಿಯ ಜಿಲ್ಲಾಧಿಕಾರಿಗಳ ಸರಕಾರಿ ನಿವಾಸದ ಆವರಣದಲ್ಲಿ ಬೆಳೆಯಲಾಗಿದ್ದ ಶ್ರೀಗಂಧದ ಮರವೊಂದನ್ನು ಚಾಲಾಕಿ ಕಳ್ಳರು ಕತ್ತರಿಸಿಕೊಂಡು ಹೋಗಿದ್ದಾರೆ.

ರವಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಮರವನ್ನು ಕತ್ತರಿಸಿ ತೆಗೆದುಕೊಂಡು ಹೋಗಲಾಗಿದ್ದು ಜಿಲ್ಲಾಧಿಕಾರಿಗಳ ಗೃಹದಲ್ಲಿ ಕೆಲಸ ಮಾಡುವ ಒಬ್ಬರು ಮರ ಕತ್ತರಿಸಿದನ್ನು ಕಂಡು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅರಣ್ಯ ಅಧಿಕಾರಿ ಆರ್ ಎಸ್ ಉಪ್ಪಾರ ಅವರು ಸ್ಥಳಕ್ಕೆ ಭೆಟ್ಟಿ ನೀಡಿ ಪೊಲೀಸ್ ದೂರು ದಾಖಲಿಸಿದ್ದಾರೆ.

ಮರವನ್ನು ಗರಗಸದ ಮೂಲಕ ಬುಡದಿಂದಲೇ ಕತ್ತರಿಸಲಾಗಿದೆ. ಮರವನ್ನು ನೆಟ್ಟು ಸುಮಾರು 20 ವರ್ಷ ಆಗಿರಬಹುದೆಂದು ಅವರು ತಿಳಿಸಿದರು.

ಕೆಲ ವರುಷದ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿಗಳ ಸರಕಾರಿ ಗೃಹದ ಆವರಣದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನೂ ಸಹ ಇದೇ ತರಹ ಕತ್ತರಿಸಿ ತೆಗೆದುಕೊಂಡು ಹೋಗಲಾಗಿತ್ತು.

You might also like
Leave a comment