This is the title of the web page

ಮಾರ್ಚ 9 ರಂದು ಚನ್ನಮ್ಮ ವಿವಿ ಘಟಿಕೋತ್ಸವ

ಬೆಳಗಾವಿ, 7- ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 9ನೆಯ ಘಟಿಕೋತ್ಸವ ಸುವರ್ಣ ವಿಧಾನಸೌಧದಲ್ಲಿ ಮಾರ್ಚ 9ರಂದು ಮುಂಜಾನೆ 10 ಗಂಟೆಗೆ ಜರುಗಲಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಎಂ ರಾಮಚಂದ್ರ ಗೌಡ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಮಾಹಿತಿ ನೀಡಿದ ಅವರು, ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ ಗೆಹಲೋಟ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಸಿಎನ್ ಅಶ್ವಥ ನಾರಾಯಣ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು ವಿಜ್ಞಾನಿ ವೀರೇಂದ ಚವಾಣ ಅವರು ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ.

ಪಂಡಿತ ರಾಜೀವ ತಾರಾನಾಥ, ಎಚ್ ಸುದರ್ಶನ್ ಹಾಗು ವಾಧೀರಾಜ ದೇಶಪಾಂಡೆ ಅವರನ್ನು ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಗುವದು ಎಂದು ತಿಳಿಸಿದರು.

35,484 ಸ್ನಾತಕ, 2,739 ಸ್ನಾತಕೋತ್ತರ ಹಾಗು 188 ವಿದ್ಯಾರ್ಥಿಗಳು ಸ್ನಾತಕೋತ್ತರ ಡಿಪ್ಲೋಮಾ ಪದವಿ ಪಡೆಯಲಿದ್ದಾರೆ ಎಂದು ರಾಮಚಂದ್ರ ಗೌಡ ತಿಳಿಸಿದರು.

You might also like
Leave a comment