Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Technology News

ಒಮ್ಮೆ ಚಾರ್ಜ ಮಾಡಿದರೆ 150 ಕಿಲೋ ಮೀಟರ್ ಓಡುತ್ತೆ ಈ ಕಾರ್….!


ಹುಬ್ಬಳ್ಳಿ, ೪- ಪೆಟ್ರೋಲ್ – ಡೀಸೆಲ್ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಹುತೇಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದರ ಮಧ್ಯೆ ಹುಬ್ಬಳ್ಳಿ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ತಯಾರಿಸಿರುವ ವಿದ್ಯುತ್ ಚಾಲಿತ ವಾಹನ ಎಲ್ಲರ ಗಮನ ಸೆಳೆಯುತ್ತಿದೆ.

ಸ್ಪೋಟರ್ ಮೊಬಿಲಿಟಿ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಈ ವಾಹನವನ್ನು ತಯಾರಿಸಿದ್ದು, ಇದಕ್ಕೆ ಸ್ಪೋಟರ್ ಎಂದು ಹೆಸರಿಡಲಾಗಿದೆ. ಮುಂದೆ ಎರಡು ಚಕ್ರ ಹಾಗೂ ಹಿಂದೆ ಒಂದು ಚಕ್ರವನ್ನು ಹೊಂದಿರುವ ಈ ವಾಹನದಲ್ಲಿ ಇಬ್ಬರು ಆರಾಮವಾಗಿ ಪ್ರಯಾಣಿಸಬಹುದಾಗಿದೆ.

ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 125 ರಿಂದ 150 ಕಿಲೋಮೀಟರ್ ವರೆಗೆ ಸಂಚರಿಸಬಹುದು ಎಂದು ಹೇಳಲಾಗಿದ್ದು, ಮುಂದಿನ ವರ್ಷ ಈ ವಾಹನ ರಸ್ತೆಗಿಳಿಯುವ ನಿರೀಕ್ಷೆ ಇದೆ. ಬೆಲೆ 2.5 ಲಕ್ಷ ರೂಪಾಯಿಗಳವರೆಗೆ ಇರಲಿದೆ ಎನ್ನಲಾಗಿದ್ದು, ಕಡಿಮೆ ಬೆಲೆಯಲ್ಲಿ ಕಾರ್ ಮಾದರಿಯ ವಾಹನ ಗ್ರಾಹಕರಿಗೆ ಲಭ್ಯವಾಗಲಿದೆ.


Leave a Reply