This is the title of the web page

ರೌಡಿ ಮೇಲೆ ಗುಂಡು : ಚವ್ಹಾಣ ಬಂಧನದ ವಿವರಣೆ 

 

ಬೆಳಗಾವಿ : ಕಳೆದ ಮಾರ್ಚ 15ರಂದು ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಕೊಲೆಗೆ ಸಂಬಂಧಿಸಿದಂತೆ ಬೇಕಾಗಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರದ ಪೊಲೀಸರಿಗೆ ಕೊಲೆ, ಸುಲಿಗೆ, ಮುಂತಾದ 10ಕ್ಕೂ ಹೆಚ್ಚು ಪ್ರಕರಣಗಳಿಗೆ ಬೇಕಾಗಿದ್ದ, ರೌಡಿಶೀಟರ್ ವಿಶಾಲ ಸಿಂಗ ಚವ್ಹಾಣ ವೀರಭದ್ರ ನಗರದಲ್ಲಿದ್ದಾನೆಂಬ ಮಾಹಿತಿ ದೊರೆಯುತ್ತಿದಂತೆ ಬೆಳಿಗ್ಗೆ 3.30ರ ಸುಮಾರಿಗೆ ಎಸಿಪಿ ನಾರಾಯಣ ಭರಮಣಿ ಅವರ ನೇತೃತ್ವದ ತಂಡ ಬಂಧಿಸಲು ತೆರಳಿತ್ತು.

 

ಇದನ್ನರಿತ ಆರೋಪಿ ವಿಶಾಲಸಿಂಗ್, ಒಂದು ಬ್ಯಾಗ್ ನಲ್ಲಿ ಚಾಕೂ ಹಾಗು ಒಂದು ಕಂಟ್ರಿ ಫಿಸ್ತೂಲ ಇಟ್ಟುಕೊಂಡು ತನ್ನ ಮೊಬೈಲ್ ಫೋನ್ ತೆಗೆದುಕೊಂಡು, ಪೊಲೀಸರಿಗೆ ಕಾಣಬಾರದೆಂದು ಹೊರಗೆ ಲೈಟ್ ಹಾಕದೇ ಕತ್ತಲಲ್ಲಿಯೇ ಹೊರಗೆ ಬಂದು ಬೈಕ್ ಸ್ಟಾರ್ಟ ಮಾಡಲು ಯತ್ನಿಸಿದ್ದಾನೆ. ಆಗ ಒಳಗೆ ನುಗ್ಗಿದ ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಆರಂಭಿಸಿದ. ಇದನ್ನರಿತ ಪೊಲೀಸರೂ ಬೆನ್ನಟ್ಟಲು ಹೋದಾಗ ಚಾಕುವಿನಿಂದ ಪೊಲೀಸ್ ಪೇದೆ ಯಾಸೀನ ನದಾಫ ಎಂಬವರ ಮೇಲೆ ದಾಳಿ ಮಾಡಿದ, ಆಗ ಅವರ ಕೈಗೆ ಗಾಯವಾಗಿದೆ.

 

ಇದರಿಂದ ಮತ್ತೊಬ್ಬರ ಮೇಲೆ ಹಲ್ಲೆ ಮಾಡುತ್ತಾನೆ ಎಂದು ಎಸಿಪಿ ನಾರಾಯಣ ಭರಮಣಿ, ತಮ್ಮ ಸರ್ವಿಸ್ ರಿವಾಲ್ವರ್ ಹಿಡಿದು ಚಾಕೂ ಎಸೆದು ಶರಣಾಗಲು ಆದೇಶಿದರೂ ಚಾಕುವಿನಿಂದ ದಾಳಿ ಮಾಡಲು ಮುಂದಾದಾಗ ಅವನ ಕಾಲಿಗೆ ಒಂದು ಗುಂಡು ಹೊಡೆದು ಅವನನ್ನು ಬಂಧಿಸಿದ್ದಾರೆ.

 

ರೌಡಿ ವಿಶಾಲ ಸಿಂಗ ಚವ್ಹಾಣ ಹಾಗೂ ಪೊಲೀಸ್ ಪೇದೆ ಯಾಸೀನ ನದಾಫ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ರೌಡಿಶೀಟರ್ ಬ್ಯಾಗನಲ್ಲಿ ಮಾರಕಾಸ್ತ್ರ, ಕಂಟ್ರಿ ಪಿಸ್ತೂಲ ಪತ್ತೆ

 

ಆರೋಪಿ ಚವ್ಹಾಣ ಬಳಿ ಮಾರಕಾಸ್ತ್ರ ಹಾಗೂ ಕಂಟ್ರಿ ಪಿಸ್ತೂಲ್ ಪತ್ತೆಯಾಗಿದೆ. ಅವನ ವಿರುದ್ಧ ಕರ್ನಾಟಕದಲ್ಲಿ 9 ಹಾಗೂ ಮಹಾರಾಷ್ಟ್ರದಲ್ಲಿ ಎರಡು ಪ್ರಕರಣಗಳಿವೆ.

 

You might also like
Leave a comment