Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಬೌದ್ಧ ಬಿಕ್ಕು ವೇಷದಲ್ಲಿ ಬೇಹುಗಾರಿಕೆ; ಚೀನಾ ಯುವತಿಯ ಬಂಧನ


ಹೊಸದಿಲ್ಲಿ: ಉತ್ತರ ದೆಹಲಿಯ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಬೌದ್ಧ ಬಿಕ್ಕು ವೇಷದಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ಶಂಕಿತ ಚೀನಾ ಯುವತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಕೆಯ ಬಳಿಯಿದ್ದ ಗುರುತು ಪತ್ರದಲ್ಲಿ ನೇಪಾಳ ರಾಜಧಾನಿ ಕಾಠ್ಮಂಡು ವಿಳಾಸ ಹೊಂದಿದ್ದು, ಡೋಲ್ಮಾ ಲಾಮಾ ಎಂಬ ಹೆಸರನ್ನು ಹೊಂದಿದ್ದಾಳೆ. ಆದರೆ ಆಕೆಯ ನಿಜವಾದ ಹೆಸರು ಕೈ ರೂವೊ ಎಂದು ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿರುವುದು ವರದಿಯಾಗಿದೆ.

ದೆಹಲಿ ವಿಶ್ವವಿದ್ಯಾನಿಯಲದ ಉತ್ತರ ಕ್ಯಾಂಪಸ್ ಬಳಿ ಇರುವ ಪ್ರವಾಸಿಗರ ಜನಪ್ರಿಯ ಟಿಬೆಟಿಯನ್ ನಿರಾಶ್ರಿತ ಶಿಬಿರದ ಮಜ್ನು ಕಾ ತಿಲ್ಲಾ ಕಾಲೋನಿಯಲ್ಲಿ ವಾಸವಾಗಿದ್ದಳು. ಈ ಕಾಲೋನಿಯಲ್ಲಿ ಈಕೆ ಬೌದ್ಧ ಬಿಕ್ಕು ವೇಷದಲ್ಲಿ ವಾಸವಾಗಿದ್ದಳು.

ಡೋಲ್ಮಾ ಬಗ್ಗೆ ಪೊಲೀಸ್ ಅಧಿಕಾರಿಗಳು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ ಅವರ ದಾಖಲೆಗಳನ್ನು ಪರಿಶೀಲಿಸಿದಾಗ, ಕೈ ರೂವೋ 2019ರಲ್ಲಿ ಚೀನಾದ ಪಾಸ್ ಪೋರ್ಟ್ ಬಳಸಿ ಭಾರತಕ್ಕೆ ಬಂದಿರುವುದಾಗಿ ಪತ್ತೆಯಾಗಿದೆ.

ಡೋಲ್ಮಾಳನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದ ಸಂದರ್ಭದಲ್ಲಿ ತನ್ನನ್ನು ಚೀನಾದ ಕಮ್ಯೂನಿಷ್ಟ್ ಪಕ್ಷದ ಕೆಲವು ಮುಖಂಡರು ಕೊಲ್ಲಲು ಬಯಸಿದ್ದರು ಎಂದು ತಿಳಿಸಿದ್ದಳು. ಈಕೆಗೆ ಇಂಗ್ಲೀಷ, ಮ್ಯಾಂಡ್ರಿಯನ್ ಮತ್ತು ನೇಪಾಳಿ ಸೇರಿ ಮೂರು ಭಾಷೆಗಳು ತಿಳಿದಿರುತ್ತವೆ.

ಆಕೆಯ ಹೇಳಿಕೆ ಮತ್ತು ನಡವಳಿಕೆ ಬಗ್ಗೆ ಸಂಶಯ ಹೊಂದಿದ್ದು, ಬಂಧನಕ್ಕೊಳಗಾಗಿರುವ ಡೋಲ್ಮಾ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.


A B Dharwadkar
the authorA B Dharwadkar

Leave a Reply