This is the title of the web page

ಕಾರ್ಮಿಕರಿಗಾಗಿ “ಸಂಚಾರಿ ಆಸ್ಪತ್ರೆ” ಲೋಕಾರ್ಪಣೆ

ಬೆಳಗಾವಿ, 11- ಕಟ್ಟಡ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಅವರಿರುವ ಸ್ಥಳದಲ್ಲೇ ಆರೋಗ್ಯ ಸೇವೆ ನೀಡುವ “ಶ್ರಮಿಕ ಸಂಜೀವಿನಿ” ಹೆಸರಿನ ಆಂಬುಲೆನ್ಸ ಮಾದರಿಯ ಸಂಚಾರಿ ಆಸ್ಪತ್ರೆಯನ್ನು ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಲೋಕಾರ್ಪಣೆಗೊಳಿಸಿದರು.

ರಾಣಿ ಚೆನ್ನಮ್ಮಾ ವೃತ್ತದಲ್ಲಿ ಹಸಿರು ಧ್ವಜ ತೋರಿಸುವ ಮೂಲಕ ಸಂಚಾರಿ ಆಸ್ಪತ್ರೆಗೆ
ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಬೆನಕೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಈ ಯೋಜನೆಯ ಕೇಂದ್ರಬಿಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಶಿವರಾಮ ಹೆಬ್ಬಾರ್‍ ಅವರಿಗೆ ಧನ್ಯವಾದ ತಿಳಿಸಿದರು.

ಇದರಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಿಂತ ಹೆಚ್ಚಿನ ಸೌಲಭ್ಯಗಳಿದ್ದು ಕಾರ್ಮಿಕರಿಗೆ ಹೆಚ್ಚಿನ ಉಪಯೋಗವಾಗಲೆಂದು ಈ ವಾಹನ ಮನೆಮನೆಗೆ ತೆರಳಿ ಸೇವೆಯನ್ನು ಒಡಗಿಸಲಿದೆ.

ಕಾರ್ಮಿಕರೆಂದ ಮೇಲೆ ಗಾಯಗಳಾಗುತ್ತವೆ. ಹಾಗಾಗಿ ಅದಕ್ಕೆ ಚಿಕಿತ್ಸೆ ನೀಡಬೇಕಾದ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಈ ವಾಹನ ಹೊಂದಿದೆ.

ಈ ಸಂದರ್ಭದಲ್ಲಿ ಕಾರ್ಮಿಕ ಅಧಿಕಾರಿ ವೆಂಕಟೇಶ ಸಿಂಧಿಹಟ್ಟಿ ಹಾಗೂ ತರಣ್ಣುಮ್ ಆದಿ ಉಪಸ್ಥಿತರಿದ್ದರು.

You might also like
Leave a comment