ಅಹಮದಾಬಾದ, ೧೨: ಗುರುವಾರ ಮಧ್ಯಾಹ್ನ 1:38 ಕ್ಕೆ ಅಹಮದಾಬಾದ ವಿಮಾನ ನಿಲ್ದಾಣದಿಂದ ಅಲಂಡನ್ಗೆ ಹೊರಟಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಸತಿ ಪ್ರದೇಶಕ್ಕೆ (ಮೇಘನಿ ನಗರ) ಪತನಗೊಂಡಿತು. ಹಲವಾರು ಸಾವು-ನೋವುಗಳ ಶಂಕೆ ವ್ಯಕ್ತವಾಗಿದೆ.
ಏರ್ ಇಂಡಿಯಾ ವಿಮಾನವು ಬೋಯಿಂಗ್ 787-8 ಡ್ರೀಮ್ ಲೈನರ್ ಅವಳಿ ಜೆಟ್ ಆಗಿದ್ದು, ಒಟ್ಟು 230 ಪ್ರಯಾಣಿಕರು ಮತ್ತು ಪೈಲಟ್ ಇನ್ ಕಮಾಂಡ್ ಸುಮಿತ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಅವರೊಂದಿಗೆ 12 ಸಿಬ್ಬಂದಿ ವಿಮಾನದಲ್ಲಿದ್ದರು.
ಅಹಮದಾಬಾದನಿಂದ ಮಧ್ಯಾಹ್ನ 1.38 ಕ್ಕೆ ಹೊರಟಿದ್ದ ವಿಮಾನವು ಬೋಯಿಂಗ್ 787-8 ವಿಮಾನದಲ್ಲಿ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಇವರಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು.
ಪೊಲೀಸ್ ನಿಯಂತ್ರಣ ಕೊಠಡಿಯ ಪ್ರಕಾರ, ಏರ್ ಇಂಡಿಯಾ ವಿಮಾನ AI 171 ಲಂಡನ್ಗೆ ತೆರಳುತ್ತಿತ್ತು. “ಜೂನ್ 12, 2025 ರಂದು, ಅಹಮದಾಬಾದ್ನಿಂದ ಗ್ಯಾಟ್ವಿಕ್ಗೆ AI-171 ವಿಮಾನವನ್ನು ಚಲಾಯಿಸುತ್ತಿದ್ದ ಮೆಸರ್ಸ್ ಏರ್ ಇಂಡಿಯಾ B787 ವಿಮಾನ VT-ANB, ಅಹಮದಾಬಾದ್ನಿಂದ ಟೇಕ್ ಆಫ್ ಆದ ತಕ್ಷಣ ಅಪಘಾತಕ್ಕೀಡಾಯಿತು.