This is the title of the web page

ಪೊಲೀಸ್ ಠಾಣೆಯಿಂದ ಜೀಪ್ ಕದ್ದ ಕ್ಲೀನರ್

ಹುಬ್ಬಳ್ಳಿ, 2- ಪ್ರತಿದಿನ ಪೊಲೀಸ್ ಜೀಪ್ ತೊಳೆಯತ್ತಿದ್ದ ವ್ಯಕ್ತಿಯೋರ್ವ ಪೊಲೀಸ್ ವಾಹನವನ್ನೇ ಕಳ್ಳತನ ಮಾಡಿ, ಸಿಕ್ಕಿಬಿದ್ದಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.

ನಾಗಪ್ಪ ಹಡಪದ ಎಂಬವ ಪೊಲೀಸ್ ಜೀಪ್​ ಕದ್ದ ಆರೋಪಿ. ಪ್ರತಿದಿನ ಪೊಲೀಸ್ ವಾಹನವನ್ನು ಕ್ಲೀನ್ ಮಾಡಲು ಠಾಣೆಗೆ ಬರುತ್ತಿದ್ದ ನಾಗಪ್ಪ, ಠಾಣೆಯಿಂದಲೇ ಜೀಪ್ ಕದ್ದುಕೊಂಡು ಬ್ಯಾಡಗಿ ಪರಾರಿಯಾಗಿದ್ದ.

ಕೂಡಲೇ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ವಾಹನವನ್ನ ಚಲಾಯಿಸುವುದು ತನಗೆ ಅಚ್ಚುಮೆಚ್ಚು. ಅಷ್ಟೇ ಅಲ್ಲ, ಅದನ್ನು ಕದ್ದು ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಅದಕ್ಕಾಗಿ ಹಲವು ತಿಂಗಳುಗಳಿಂದ ಹೊಂಚು ಹಾಕಿದ್ದನಂತೆ. ಹೀಗಾಗಿ, ಪೊಲೀಸ್ ಠಾಣೆಯ ಸಿಬ್ಬಂದಿ ವಿಶ್ವಾಸ ಗಳಿಸಿಕೊಂಡಿದ್ದ. ಕಳ್ಳತನ ಮಾಡುವ ಸಮಯದಲ್ಲಿ ಪಿಎಸ್‌ಐ ರಜೆಯಲ್ಲಿರುವುದನ್ನ ಖಾತ್ರಿ ಪಡಿಸಿಕೊಂಡು ಜೀಪ್​ ಕಳ್ಳತನ ಮಾಡಿದ್ದಾನೆ ಎಂದು ನಾಗಪ್ಪ ಹೇಳಿದ್ದಾನೆ.

You might also like
Leave a comment