This is the title of the web page

ಬಾಲಕನಿಗೆ ಕಚ್ಚಿ ಸ್ಥಳದಲ್ಲೇ ಸತ್ತ ನಾಗರಹಾವು : ಬಾಲಕ ಪಾರಾದ ವಿಚಿತ್ರ ಘಟನೆ

ಗೋಪಾಲಗಂಜ,  (ಬಿಹಾರ), ೨೩- ಹಾವು ಕಚ್ಚಿದರೆ ಮನುಷ್ಯ ಸಾಯುತ್ತಾನೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಬಿಹಾರದಲ್ಲಿ ನಾಗರ ಹಾವೊಂದು ನಾಲ್ಕು ವರ್ಷದ ಬಾಲಕನಿಗೆ ಕಚ್ಚಿದ ಮರುಕ್ಷಣವೇ ಸಾವನ್ನಪ್ಪಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಆತ ಗುಣಮುಖನಾಗಿದ್ದಾನೆ.

ಗೋಪಾಲ​ಗಂಜ್​ ತಾಲೂಕಿನ ಖಜೂರಿ ಪೂರ್ವ ತೋಲಾ ಗ್ರಾಮದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದ್ದು, ಮನೆಯ ಮುಂದೆ ಆಟವಾಡುತ್ತಿದ್ದ ಅನೂಜಕುಮಾರ ಎಂಬ ಬಾಲಕನಿಗೆ ಹಾವು ಕಚ್ಚಿದೆ. ಆದರೆ ಕಚ್ಚಿದ ಹಾವು ಸ್ವಲ್ಪ ಹೊತ್ತು ಒದ್ದಾಡಿ ನಿಮಿಷದಲ್ಲಿಯೇ ಸಾವನ್ನಪ್ಪಿದೆ.

ಹಾವು ಕಚ್ಚಿದಾಗ ಬಾಲಕ ಅಳಲು ಶುರು ಮಾಡಿದ್ದಾನೆ. ಆಗ ಕುಟುಂಬಸ್ಥರು ಮನೆಯಿಂದ ಹೊರಬಂದು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವಿಸ್ಮಯಕರ ಘಟನೆ ತಿಳಿಯುದ್ದಂತೆ ಸುತ್ತಮುತ್ತಲ ಜನರು ಮಗುವನ್ನು ನೋಡಲು ಧಾವಿಸಿ ಬರುತ್ತಿದ್ದಾರೆ ಎಂದು ಮಗುವಿನ ತಾಯಿ ಕಿರಣದೇವಿ ಪತ್ರಕರ್ತರಿಗೆ ವಿವರಿಸಿದರು.

You might also like
Leave a comment