This is the title of the web page

ದ್ವೇಷ ಪ್ರಚೋದನೆ ಪೋಸ್ಟ : ದೂರು ದಾಖಲು

ಬೆಳಗಾವಿ : ಕರ್ನಾಟಕ ವಿರೋಧಿ ಪೋಸ್ಟ ಮಾಡಿದ ಇನಸ್ಟಾಗ್ರಾಮ್ ಅಡ್ಮಿನ್ ವಿರುದ್ಧ ಬೆಳಗಾವಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದಾರೆ.

ಮರಾಠಿ ಪರ ‘ರಾಯಲ್ ಇನಸ್ಟಾಗ್ರಾಮ್’ ನ ಕಪ್ಪು ಅಕ್ಷರದಲ್ಲಿ ಮರಾಠಿ ಭಾಷೆಯಲ್ಲಿ ಬರೆದ ಪೋಸ್ಟ ಒಂದರಲ್ಲಿ ದಿನಾಂಕ 27ರೊಳಗೆ ಮರಾಠಿ ಭಾಷೆಯಲ್ಲಿ ನಾಮಫಲಕಗಳನ್ನು ಹಾಕದಿದ್ದರೆ ಒಂದೇ ಒಂದು ಹಳದಿ ಕೆಂಪು ಧ್ವಜ, ಕನ್ನಡ ನಾಮಫಲಕವಿರುವದಿಲ್ಲ ಎಂದು ಕಪ್ಪು ಅಕ್ಷರದಲ್ಲಿ ಪೋಸ್ಟ ಮಾಡಲಾಗಿದೆ.

ಈ ಪೋಸ್ಟ ಕನ್ನಡಿಗರ ಮತ್ತು ಮರಾಠಿಗರಲ್ಲಿ ಪರಸ್ಪರ ದ್ವೇಷ ಭಾವನೆ, ಭಾಷಾ ಸಾಮ್ಯರಸಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆಯಿದ್ದು, ಇನಸ್ಟಾಗ್ರಾಮ್ ಅಡ್ಮಿನ್ ವಿರುದ್ಧ (IPC ) ಭಾರತೀಯ ದಂಡ ಸಂಹಿತೆ ಸೆಕ್ಷನ್ 120, 153, 505 (1)(B) ಮತ್ತು 505 (2) ಅಡಿ ಖಡೇ ಬಜಾರ ಠಾಣೆಯಲ್ಲಿ ದೂರು ದಾಖಲಾಗಿದೆ.

You might also like
Leave a comment