ಧಾರವಾಡ: ಬ್ಯೂಟಿಷಿಯನ್ ಜೊತೆ ಕಾಂಗ್ರೆಸ್ ಮುಖಂಡನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆ ಜಿಲ್ಲೆಯ ವಿದ್ಯಾಗಿರಿ ಬಡಾವಣೆಯಲ್ಲಿ ನಡೆದಿದೆ.
ಸ್ಪಾ ಮಾಲೀಕ ಮನೋಜ ಕರ್ಜಗಿ (54) ಬಂಧಿತ ಆರೋಪಿ. ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕನಾಗಿದ್ದ ಇವರು, ಮಾಜಿ ಸಚಿವ ವಿನಯ ಕುಲಕರ್ಣಿ ಆಪ್ತ ಎಂದು ಹೇಳಲಾಗಿದೆ.
ತನ್ನದೇ ಸ್ಪಾದಲ್ಲಿ ಕೆಲಸಕ್ಕಿದ್ದ 19 ವರ್ಷದ ಬ್ಯೂಟಿಷಿಯನ್ ಜತೆ ಅನುಚಿತವಾಗಿ ವರ್ತಿಸಿದ್ದು, ಯುವತಿ ಕೂಗಿಕೊಂಡು ಹೊರಬಂದು ಬಳಿಕ ಸ್ನೇಹಿತರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ವಿದ್ಯಾಗಿರಿ ಪೊಲೀಸರು ಕರ್ಜಗಿಯನ್ನು ವಶಕ್ಕೆ ಪಡೆದಿದ್ದಾರೆ.