This is the title of the web page

ದ್ವೇಷ ಹರಡುವದನ್ನು ಬಿಟ್ಟು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿ -ಕಾಂಗ್ರೆಸ್

ಹೊಸದಿಲ್ಲಿ, 17:- ಸಮಾಜದಲ್ಲಿ ದ್ವೇಷ ಹರಡುವ ಬದಲು ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಒತ್ತಾಯಿಸಿದೆ.

ಕಾಶ್ಮೀರ ಫೈಲ್ಸ್ ಚಿತ್ರದ ಮೂಲಕ ಸಮಾಜದಲ್ಲಿ ದ್ವೇಷವನ್ನು ಹರಡಲು ಸರ್ಕಾರ ಪ್ರಯತ್ನಿಸುತ್ತಿದೆ. ಭಾರತ ಒಂದು ಸಿನೆಮಾದಿಂದ ನಡೆಯುವುದಿಲ್ಲ. ಸರ್ಕಾರದ ನೀತಿ ಮತ್ತು ಆಡಳಿತದಿಂದ ನಡೆಯುತ್ತದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ ಸುರ್ಜೇವಾಲಾ ಬುಧವಾರ ಹೇಳಿದರು.

“ಸಿನೆಮಾ ನೋಡಿ ಅಥವಾ ಪ್ರದರ್ಶಿಸಿ ಸಮಾಜದಲ್ಲಿ ದ್ವೇಷ ಮತ್ತು ಒಡಕು ಮೂಡಿಸಿ ಜೀವನ ನಡೆಸಲು ಸಾಧ್ಯವಿಲ್ಲ. ನಮ್ಮ ಕಾಶ್ಮೀರಿ ಪಂಡಿತರಿಗೆ ಯಾವಾಗ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂಬುದನ್ನು ಮೋದಿಜಿ ಹೇಳಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಅವರ ಸರ್ಕಾರ ಇರುವುದರಿಂದ ನಮಗೆ ಆ ಬಗ್ಗೆ ಸ್ಪಷ್ಟ ದಿನಾಂಕ ನೀಡಬೇಕು” ಎಂದಿದ್ದಾರೆ.

ಎಷ್ಟು ಕಾಶ್ಮೀರಿಗಳಿಗೆ ಪುನರ್ವಸತಿ ಮತ್ತು ಉದ್ಯೋಗ ನೀಡಲಾಗಿದೆ. ಅವರಿಗೆ ಎಷ್ಟು ಮನೆಗಳು ಮತ್ತು ಎಷ್ಟು ಪರಿಹಾರ ನೀಡಲಾಗಿದೆ ಎಂಬುದನ್ನು ಸಹ ಮೋದಿ ಹೇಳಬೇಕು ಎಂದು ಸುರ್ಜೇವಾಲಾ ಅವರು ಒತ್ತಾಯಿಸಿದ್ದಾರೆ.

“ಭಾರತ ಒಂದು ಸಿನೆಮಾ ಅಲ್ಲ. ವಾಸ್ತವವಾಗಿ ಒಂದು ಚಿತ್ರದಿಂದ ಭಾರತ ನಡೆಯುವುದಿಲ್ಲ, ಸರ್ಕಾರದ ನೀತಿ ಮತ್ತು ಆಡಳಿತದಿಂದ ದೇಶ ನಡೆಯುತ್ತದೆ” ಎಂದು ಅವರು ಹೇಳಿದ್ದಾರೆ.

ಕಾಶ್ಮೀರಿ ಪಂಡಿತರು ವಲಸೆ ಹೋಗಿದ್ದು ಬಿಜೆಪಿ ಬೆಂಬಲಿತ ವಿಪಿ ಸಿಂಗ್ ಸರ್ಕಾರದ ಅವಧಿಯಲ್ಲಿ. ಆ ಸಮಯದಲ್ಲಿ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಏಕೆ ಹಿಂತೆಗೆದುಕೊಳ್ಳಲಿಲ್ಲ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

You might also like
Leave a comment