This is the title of the web page

ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆಗೆ ಕಾಂಗ್ರೆಸ್ ವಿರೋಧಿಸಿಲ್ಲ

ಕಲಬುರಗಿ, 22- ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಕೆಗೆ ಕಾಂಗ್ರೆಸ್ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮಂಗಳವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮತ್ತು ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ದೂರದರ್ಶನದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಪ್ರಸಾರ ಮಾಡಲಾಗಿತ್ತು. ಜನರಿಗೆ ರಾಮಾಯಣ ಮತ್ತು ಮಹಾಭಾರತದ ನೈತಿಕತೆಯನ್ನು ತಿಳಿಸಲು ಕಾಂಗ್ರೆಸ್ ಪಕ್ಷ ದೂರದರ್ಶನದಲ್ಲಿ ಆ ಮಹಾಕಾವ್ಯಗಳನ್ನು ಪ್ರಸಾರ ಮಾಡಿತು ಮತ್ತು ಅದನ್ನು ಇಡೀ ದೇಶ ಕುತೂಹಲದಿಂದ ವೀಕ್ಷಿಸಿತು ಎಂದರು.

ಬಿಜೆಪಿ ಸರ್ಕಾರ ಈಗ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷದ ನಕಲು ಹೊರತು ಬೇರೇನೂ ಅಲ್ಲ. ಅವರು ಅದನ್ನು ಪರಿಚಯಿಸಲಿ. ಆದರೆ ಇದು ಜಾತ್ಯತೀತ ದೇಶವಾಗಿರುವುದರಿಂದ ಬೈಬಲ್ ಮತ್ತು ಖುರಾನ್ ಸಹ ನೈತಿಕ ವಿಜ್ಞಾನದಲ್ಲಿ ಪರಿಚಯಿಸಬೇಕು ಎಂದರು.

ಕಾಂಗ್ರೆಸ್ ಪಕ್ಷವನ್ನು ಗಾಂಧಿ ಕುಟುಂಬದಿಂದ ಮುಕ್ತಗೊಳಿಸಬೇಕು ಎಂಬ ಜಿ-23ರ ಬೇಡಿಕೆಯ ಬಗ್ಗೆ ಉತ್ತರಿಸಿದ ಅವರು, ದೇಶದ ಕೆಲವರನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದಾರೆ. ಗಾಂಧಿ ಕುಟುಂಬವಿಲ್ಲದಿದ್ದರೆ ಕಾಂಗ್ರೆಸ್ ಇಲ್ಲವೇ ಇಲ್ಲ ಎಂದರು.

You might also like
Leave a comment