This is the title of the web page

ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಕಾನ್ಸ‌ಟೇಬಲ್ ಆತ್ಮಹತ್ಯೆ 

 

ಗದಗ, ೧೬- ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಕಾನ್ಸಟೇಬಲ್ ಆದ ಕೆ. ಎಸ್ ಕೊಪ್ಪದ ಎಂಬವರು ತಮಗೆ ನೀಡಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆ. ಎಸ್ ಕೊಪ್ಪದ ಅವರು ಕಚೇರಿಯ ಭದ್ರತಾ ಕೊಠಡಿಯಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ. ಡಿಎಆರ್ ದಳಕ್ಕೆ ಸೇರಿದ್ದ ಕೊಪ್ಪದ ಅವರ ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣವಿರಬಹುದೆಂದು ಹೇಳಲಾಗಿದೆ.

You might also like
Leave a comment