This is the title of the web page

ಬೆಳಗಾವಿಯಲ್ಲಿ 46 ಜನರಿಗೆ ಕೊರೋನಾ

ಬೆಳಗಾವಿ, 4- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮೂರನೇ ಅಲೆ ತೀವ್ರವಾಗಿ ಅಪ್ಪಳಿಸಿದ್ದು ಕಳೆದ 24 ಗಂಟೆಯಲ್ಲಿ 46 ಜನರಲ್ಲಿ ಸೋಂಕು ಕಂಡುಬಂದಿದೆ.

ಬೆಳಗಾವಿ ನಗರ ಮತ್ತು ತಾಲೂಕಿನಲ್ಲಿಯೇ 36, ಬೈಲಹೊಂಗಲ-04, ಚಿಕ್ಕೋಡಿ-02, ಹುಕ್ಕೇರಿ-01, ಖಾನಾಪುರ-01, ಸವದತ್ತಿ-01 ಕೊರೊನಾ ಪ್ರಕರಣ ಕಾಣಿಸಿಕೊಂಡಿವೆ.

ಸೊಂಕಿತರಿಗಾಗಿ ನಗರದಲ್ಲಿರುವ ಜಿಲ್ಲಾಸ್ಪತ್ರೆಯ “ಕೋವಿಡ್ ಕೇರ್ ಸೆಂಟರ್” ಪುನಃ ಸಜ್ಜುಗೊಳಿಸಲಾಗಿದೆ. ಇಂದಿನ ಸೋಂಕಿತರ ಸಂಖ್ಯೆ ಸೇರಿ ಒಟ್ಟು ಜಿಲ್ಲೆಯಲ್ಲಿ 160 ಜನ ಸೋಂಕಿನಿಂದ ಬಳಲುತ್ತಿದ್ದಾರೆ.

You might also like
Leave a comment