This is the title of the web page

ಪಿಯು ವಸತಿ ಕಾಲೇಜಿನ 62 ವಿದ್ಯಾರ್ಥಿಗಳಿಗೆ ಕೊರೋನಾ

ಅಥಣಿ, 15-  ನಿನ್ನೆ ಶುಕ್ರವಾರ ಅಥಣಿ ತಾಲೂಕಿನ ಯಂಕಂಚಿ ಪ್ರೌಢಶಾಲೆಯ 10 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿತ್ತು. ಇಂದು ಬನಜವಾಡ ವಸತಿ ಕಾಲೇಜಿನ 62 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಧೃಡಪಟ್ಟಿದೆ.

ಈ ಕುರಿತು ಅಥಣಿ ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ ಮಾಹಿತಿ ನೀಡಿದ್ದು, ಅಥಣಿ ತಾಲೂಕಿನಲ್ಲಿ ಬಿಟ್ಟು ಬಿಡದೇ ಕೊರೊನಾ ಸೋಂಕು ಕಾಡುತ್ತಿದೆ. ತಾಲೂಕಿನ ಹೊರವಲಯದಲ್ಲಿರುವ ಬನಜವಾಡ ಪಿ ಯು ವಸತಿ ಕಾಲೇಜಿನ  200ಕ್ಕೂ ಅಧಿಕ ವಿದ್ಯಾರ್ಥಿಗಳ ಸ್ವ್ಯಾಬ್ ಪರೀಕ್ಷೆ ಪಡೆಯಲಾಗಿತ್ತು. ಇದರಲ್ಲಿ 62 ವಿದ್ಯಾರ್ಥಿಗಳ ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ತಿಳಿಸಿದರು.

ಸೊಂಕಿತ ವಿದ್ಯಾರ್ಥಿಗಳನ್ನು ವಸತಿ ಗೃಹದಲ್ಲೇ ಪ್ರತ್ಯೇಕ ಇಡಲಾಗಿದ್ದು, ಇತರ ವಿದ್ಯಾರ್ಥಿಗಳನ್ನು ಅವರವರ ಮನೆಗಳಿಗೆ ಕಳುಹಿಸಲಾಗಿದೆ.

You might also like
Leave a comment