This is the title of the web page

10 ದೇಶಗಳಿಗೆ ಅಪ್ಪಳಿಸಿದ ಕೊರೋನಾ ಹೊಸ ತಳಿ ಒಮಿಕ್ರಾನ್

ಹೊಸದಿಲ್ಲಿ, 29-ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿ ಪತ್ತೆಯಾದ ಕೊರೊನಾದ ಹೊಸ ರೂಪಾಂತರ ತಳಿ “ಒಮಿಕ್ರಾನ್‌’ ಬಹುಬೇಗ ಹಲವು ದೇಶಗಳಲ್ಲಿ ವ್ಯಾಪಿಸತೊಡಗಿದೆ.

ನಿರ್ಬಂಧಗಳ ನಡುವೆಯೂ ಈ ವೈರಸ್‌ ವೇಗವಾಗಿ ಹಬ್ಬುತ್ತಿದ್ದು, 10ಕ್ಕೂ ಅಧಿಕ ದೇಶಗಳಿಗೆ ಅಪ್ಪಳಿಸಿದೆ. ಬಹುತೇಕ ಎಲ್ಲ ದೇಶಗಳೂ ಈಗ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾರಂಭಿಸಿವೆ.

ರವಿವಾರ ಆಸ್ಟ್ರೇಲಿಯಾದಲ್ಲಿ ಹಾಗೂ ಡೆನ್ಮಾರ್ಕ್‌ನಲ್ಲಿ ತಲಾ 2 ಪ್ರಕರಣಗಳು ಪತ್ತೆಯಾಗಿವೆ. ಇಸ್ರೇಲ್‌ ಸರಕಾರವು ತನ್ನ ದೇಶದೊಳಗೆ ವಿದೇಶಿಯರ ಪ್ರವೇಶಕ್ಕೇ ನಿಷೇಧ ಹೇರಿದೆ. ಜತೆಗೆ, ವಿದೇಶಗಳಿಂದ ಬರುವ ಇಸ್ರೇಲಿಗರಿಗೆ ಕಡ್ಡಾಯ ಕ್ವಾರಂಟೈನ್‌ ನಿಯಮ ಘೋಷಿಸಿದೆ.

ಒಮಿಕ್ರಾನ್ ಬಗ್ಗೆ ಅಧ್ಯಯನ ಆಗುವವರೆಗೂ ಅತಿಯಾದ ನಿರ್ಬಂಧಗಳನ್ನು ಜಾರಿ ಮಾಡಬೇಡಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ್ದರೂ ಅದಕ್ಕೆ ಯಾವ ದೇಶಗಳೂ ಕಿವಿಗೊಡುತ್ತಿಲ್ಲ.

ನ್ಯೂಜಿಲ್ಯಾಂಡ್‌, ಥಾಯ್ಲೆಂಡ್‌, ಇಂಡೋನೇಷ್ಯಾ, ಸಿಂಗಾಪುರ, ಶ್ರೀಲಂಕಾ, ಮಾಲ್ಡೀವ್ಸ್‌ ಹಾಗೂ ಸೌದಿ ಅರೇಬಿಯಾ ಕೂಡ ದ. ಆಫ್ರಿಕಾದ ದೇಶಗಳಿಂದ ಬರುವವರಿಗೆ ನಿಷೇಧ ಹೇರಿವೆ.

ಇಂಗ್ಲೆಂಡನಲ್ಲಿ ಎರಡು ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ, ಮಾಸ್ಕ ನಿಯಮ ಬಿಗಿಗೊಳಿಸಲಾಗಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಕಡ್ಡಾಯ ಪರೀಕ್ಷೆಗೂ ಸೂಚಿಸಿದೆ. ಈಗಾಗಲೇ 10 ದೇಶಗಳಿಂದ ಬರುವ ವಿಮಾನಗಳಿಗೆ ಅದು ನಿರ್ಬಂಧ ವಿಧಿಸಿದೆ.

You might also like
Leave a comment