This is the title of the web page

ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಜೋರು

ಬೆಳಗಾವಿ, 15- ಕೊರೋನಾ ಮಹಾಮಾರಿಯ ಆರ್ಭಟ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು  ಶನಿವಾರ 393 ಹೊಸ ಪ್ರಕರಣಗಳು ಪತ್ತೆಯಾಗಿ ಒಟ್ಟು ಸೋಂಕಿತರ ಸಂಖ್ಯೆ 81982ಕ್ಕೆ ಏರಿಕೆಯಾಗಿದೆ.

ಇಂದು 38 ಜನರು ಗುಣಮುಖರಾಗಿದ್ದು, ಈ ವರೆಗೆ 79282 ಜನರು ಗುಣಮುಖರಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ 1751 ಆಕ್ಟಿವ್ ಕೇಸ್‍ಗಳು ಬಾಕಿಯಿವೆ.

ಬೆಳಗಾವಿ ನಗರ ತಾಲೂಕಿನಲ್ಲಿಯೇ 179 ಕೇಸ್‍ಗಳು ದಾಖಲಾಗಿದ್ದರೆ, ಅಥಣಿ-94, ಬೈಲಹೊಂಗಲ-12, ಚಿಕ್ಕೋಡಿ-41, ಗೋಕಾಕ-05, ಹುಕ್ಕೇರಿ-08, ಖಾನಾಪುರ-01, ರಾಮದುಗ-15, ರಾಯಬಾಗ-19, ಸವದತ್ತಿ-19 ಕೊರೊನಾ ಕೇಸ್‍ಗಳು ದೃಢಪಟ್ಟಿವೆ.

You might also like
Leave a comment