This is the title of the web page

ರಾಜ್ಯದಲ್ಲಿ ಕೊರೋನಾ ಉಲ್ಬಣ

ಬೆಂಗಳೂರು, 7- ರಾಜ್ಯದಲ್ಲಿ ಮತ್ತೆ ಕೊರೋನಾ ಸ್ಪೋಟಗೊಂಡಿದ್ದು ಇಂದು ಹೊಸದಾಗಿ 8,449 ಜನರಲ್ಲಿ ಸೋಂಕು ದೃಢಪಟ್ಟಿದೆ.

ಈ ಕುರಿತು ಟ್ವಿಟ್ಟರ್ʼನಲ್ಲಿ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ, ಕಳೆದ 24 ಗಂಟೆಯಲ್ಲಿ 2,03,260 ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಬೆಂಗಳೂರಿನಲ್ಲಿ 6,812 ಸೇರಿದಂತೆ ರಾಜ್ಯಾದ್ಯಂತ 8,449 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 8,449 ಜನರಿಗೆ ಕೊರೋನಾ ದೃಢಪಟ್ಟ ಕಾರಣ ಪಾಸಿಟಿವಿಟಿ ದರ 4.15%ಕ್ಕೆ ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.

You might also like
Leave a comment