This is the title of the web page

ರಾಜ್ಯದಲ್ಲಿ 14 ಸಾವಿರ ದಾಟಿದ ಕೊರೋನಾ ಪ್ರಕರಣ; ಧಾರವಾಡ ಜಿಲ್ಲೆಯಲ್ಲಿ ಉಲ್ಬಣ

ಬೆಂಗಳೂರು, 11-ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆ ಮತ್ತಷ್ಟು ಹೆಚ್ಚಾಗುತ್ತಿದೆ. ಇಂದು, ಮಂಗಳವಾರ ಒಟ್ಟು 14,473 ಹೊಸದಾಗಿ ಸೋಂಕು ದಾಖಲಾಗಿದೆ. ಇದೇ ವೇಳೆ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ ಹಾಗೂ ಆಸ್ಪತ್ರೆಯಿಂದ 1,356 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ರಾಜ್ಯದಲ್ಲಿ ಇವರೆಗೂ ಒಟ್ಟು 30,78,129 ಮಂದಿಗೆ ಕೊರೊನಾ ಬಂದಿದೆ. 39,66,461 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರಾಜ್ಯದ ಪಾಸಿಟಿವಿಟಿ ರೇಟ್ ಶೇ.10.30ಕ್ಕೆ ಏರಿಕೆಯಾಗಿದೆ. ಹಾಗೇ ಒಟ್ಟು ಕೋವಿಡ್-19 ಮರಣ ಪ್ರಮಾಣ ಶೇ.0.03 ರಷ್ಟಿದೆ. ಧಾರವಾಡ ಜಿಲ್ಲೆಯಲ್ಲಿ ಕೊರೋನಾ ಉಲ್ಬಣಗೊಂಡಿದ್ದು 178 ಪ್ರಕರಣ ಇಂದು ದಾಖಲಾಗಿವೆ.

 

ರಾಜ್ಯದಲ್ಲಿ ಈ ವರೆಗೆ ಕೊರೊನಾ ಜೊತೆಗೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 479 ತಲುಪಿದೆ. ಈಗ ರಾಜ್ಯದಲ್ಲಿ 73,260 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,379 ಜನ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಇಂದು 10,800 ಹೊಸ ಪ್ರಕರಣಗಳು ಪತ್ತೆಯಾಗಿದೆ ಹಾಗೂ ಸೋಂಕಿನಿಂದ 3 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಮಂಗಳವಾರ ಕೋವಿಡ್ ಪಟ್ಟಿ :

ಧಾರವಾಡ 178, ಬಾಗಲಕೋಟ 9, ಬಳ್ಳಾರಿ 101, ಬೆಳಗಾವಿ 79, ಬೆಂಗಳೂರು ಗ್ರಾಮಾಂತರ 160, ಬೆಂಗಳೂರು ನಗರ 10,800, ಬೀದರ 43, ಚಾಮರಾಜನಗರ 86, ಚಿಕ್ಕಬಳ್ಳಾಪುರ 91, ಚಿಕ್ಕಮಗಳೂರು 41, ಚಿತ್ರದುರ್ಗ 47, ದಕ್ಷಿಣ ಕನ್ನಡ 583, ದಾವಣಗೆರೆ 56, ಗದಗ 21, ಹಾಸನ 121, ಹಾವೇರಿ 8, ಕಲಬುರಗಿ 109, ಕೊಡಗು 29, ಕೋಲಾರ 139, ಕೊಪ್ಪಳ 2, ಮಂಡ್ಯ 263, ಮೈಸೂರು 562, ರಾಯಚೂರು 29, ರಾಮನಗರ 59, ಶಿವಮೊಗ್ಗ 136, ತುಮಕೂರು 332, ಉಡುಪಿ 250, ಉತ್ತರ ಕನ್ನಡ 106, ವಿಜಯಪುರ 20 ಮತ್ತು ಯಾದಗಿರಿಯಲ್ಲಿ 13 ಕೊರೋನಾ ಪ್ರಕರಣ ದಾಖಲಾಗಿದೆ.

You might also like
Leave a comment