This is the title of the web page

ಸೋಮವಾರದಿಂದ ಕೋವಿಡ್ ಬೂಸ್ಟರ್ ಡೋಸ್

ಬೆಂಗಳೂರು, 8- ರಾಜ್ಯದಲ್ಲಿ ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಬೇರೆ ಬೇರೆ ರೋಗ ಲಕ್ಷಣಗಳಿಂದ ಬಳಲುತ್ತಿರುವವರಿಗೆ ಬೂಸ್ಟರ್ ಡೋಸ್ ಲಸಿಕೆ ಹಾಕಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟವರು, ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಎಲ್ಲ ಮುಂಚೂಣಿ ವಾರಿಯರ್ ಗಳಿಗೆ ಮೂರನೇ ಅಥವಾ ಬೂಸ್ಟರ್ ಡೋಸ್ ಲಸಿಕೆ ಜನೆವರಿ 10ರಿಂದ ನೀಡಲಾಗುವುದು ಎಂದು ಹೇಳಿದರು.

ಕೋವಿಡ್ 3 ನೇ ಅಲೆ ನಿಯಂತ್ರಣಕ್ಕೆ ಇನ್ನೂ ಬಿಗಿ ಕ್ರಮ ಕೈಗೊಳ್ಳಬಹುದು. ಆದರೆ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ. ಜನರು ಆತಂಕ ಪಡಬೇಕಾಗಿಲ್ಲ. ಲಾಕ್ ಡೌನ್ ಈಗ ಕಳೆದುಹೋಗಿರುವ ನೀತಿ. ಮತ್ತೆ ಹೇರುವ ಪ್ರಶ್ನೆಯೇ ಇಲ್ಲ. ಕೋವಿಡ್ ಲಸಿಕೆ ಮತ್ತು ಔಷಧಗಳನ್ನು ಬಳಸಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇವೆ. ಕೋವಿಡ್ 3 ನೇ ಅಲೆ ನಿಭಾಯಿಸಲು ಮುಂದಿನ 2ತಿಂಗಳಿಗೆ ಅಗತ್ಯದಷ್ಟು ಔಷಧ ಶೇಖರಣೆ ಮಾಡಿದ್ದೇವೆ ಎಂದರು.

You might also like
Leave a comment