This is the title of the web page

ಐಪಿಎಲ್ ಗುಂಗಿನಲ್ಲಿ ದೇಶಕ್ಕಾಗಿ ಶ್ರಮ ವಹಿಸದ ಕ್ರಿಕೆಟಿಗರು -ಗಾವಸಕರ

ಹೊಸದಿಲ್ಲಿ, 17- ಐಪಿಎಲ್ ಆಡುವ ಗುಂಗಿನಲ್ಲಿ ಕ್ರಿಕೆಟ್ ಆಟಗಾರರು ದೇಶವನ್ನು ಪ್ರತಿನಿಧಿಸುವಾಗ ಶ್ರಮಿಸುತ್ತಿಲ್ಲ ಎಂದು ಭಾರತೀಯ ಕ್ರಿಕೆಟ್ ದಂತಕಥೆ ಸುನೀಲ ಗಾವಸಕರ ಕೆಲವು ಕ್ರಿಕೆಟಿಗರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

“ಐಪಿಎಲ್ ಹರಾಜು ಎಲ್ಲಾ ಆಟಗಾರರಿಗೂ ಜೀವನವನ್ನೇ ಬದಲಾಯಿಸುವುದಾಗಿದೆ. ಈ ಕಾರಣದಿಂದ ಐಪಿಎಲ್ ಇರುವಾಗ ದೇಶಕ್ಕಾಗಿ ಶ್ರಮವಹಿಸಿ ಇವರು ಆಡುತ್ತಿಲ್ಲ ಎಂದು ಗಾವಸಕರ ಬರೆದಿದ್ದಾರೆ.

ಐಪಿಎಲ್ ಹೊರತು ಇತರ ಪಂದ್ಯಗಳಲ್ಲಿ ಶ್ರಮ ವಹಿಸಿ ಗಾಯಗೊಂಡರೆ ಐಪಿಎಲ್ ಟೂರ್ನಿಯಲ್ಲಿ ಫಿಟ್ ಆಗಿರಲು ಸಾಧ್ಯವಿಲ್ಲ ಎಂಬುದಕ್ಕಾಗಿ ಈ ರೀತಿಯ ಧೋರಣೆ ಅನುಸರಿಸುತ್ತಿದ್ದಾರೆ ಎಂದೂ ಗಾವಸಕರ ಹೇಳಿದ್ದಾರೆ.

You might also like
Leave a comment