This is the title of the web page

ಮೇಲ್ಜಾತಿಯ ಮಹಿಳೆ ತಯಾರಿಸಿದ ಆಹಾರ ತಿನ್ನಲು ನಿರಾಕರಿಸಿದ ದಲಿತರು

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಡೆಹ್ರಾಡೂನ, 27- ಉತ್ತರಾಖಂಡದ ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯ ಹಿಂದೂ ಮಹಿಳೆ ತಯಾರಿಸಿದ ಮಧ್ಯಾಹ್ನದ ಊಟವನ್ನು ತಿನ್ನಲು ನಿರಾಕರಿಸಿದ್ದಾರೆ.

ಕೆಲ ದಿನಗಳ ಹಿಂದೆ ಅದೇ ಶಾಲೆಯಲ್ಲಿ ದಲಿತ ಮಹಿಳೆ ತಯಾರಿಸಿದ ಊಟವನ್ನು ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು. ಉತ್ತರಾಖಂಡ‌ ರಾಜ್ಯದ ಚಂಪಾವತ್ ಜಿಲ್ಲೆಯ ಸುಖಿಧಾಂಗ್‌ನ ಸರ್ಕಾರಿ ಇಂಟರ್ ಕಾಲೇಜ್‌ನಲ್ಲಿ ಈ ಘಟನೆ ನಡೆದಿದೆ.

ಕಳೆದ ವಾರವಷ್ಟೇ ದಲಿತ ಸಮುದಾಯದ ಸುನೀತಾ ದೇವಿ ಅವರು ತಯಾರಿಸಿದ ಊಟವನ್ನು ಮೇಲ್ಜಾತಿ ಹಿಂದೂ ವಿದ್ಯಾರ್ಥಿಗಳು ತಿನ್ನಲು ನಿರಾಕರಿಸಿದ್ದರು. ಇದಕ್ಕೂ ಮುಂದೆ ಹೋದ ಅಲ್ಲಿನ  ರಾಜ್ಯ ಸರ್ಕಾರ ಸುನೀತಾ ದೇವಿ ಅವರನ್ನು ಕೆಲಸದಿಂದ ವಜಾಗೊಳಿಸಿ ಸಂವಿಧಾನ ವಿರೋಧಿ ಕೃತ್ಯ ಎಸಗಿತ್ತು.

ದಲಿತ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿರುವುದರ ಬಗ್ಗೆ ಉತ್ತರಾಖಂಡ ಸರ್ಕಾರದ ವಿರುದ್ದ ಭೀಮ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ ರಾವಣ ಅವರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ದೇಶಾದ್ಯಂತ ಇದು ಸುದ್ದಿಯಾಗಿತ್ತು.

“ಉತ್ತರಾಖಂಡ್‌ನ ಚಂಪಾವತ ಜಿಲ್ಲೆಯಲ್ಲಿ ದಲಿತ ಸಮುದಾಯದ ಅಡುಗೆಯ ಮಹಿಳೆಯನ್ನು ವಜಾ ಮಾಡುವ ಮೂಲಕ ಸರ್ಕಾರ ದಲಿತ ಸಮುದಾಯದ ಸ್ವಾಭಿಮಾನಕ್ಕೆ ಅವಮಾನ ಮಾಡಿದೆ. ನಮ್ಮ ಪಕ್ಷ ಮತ್ತು ಭೀಮ ಆರ್ಮಿ ತಮ್ಮ ತಾಯಂದಿರ ಮತ್ತು ಸಹೋದರಿಯರ ಸ್ವಾಭಿಮಾನದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆಕೆಯನ್ನು ಮತ್ತೇ ಹುದ್ದೆಗೆ ಸೇರಿಸಿಕೊಳ್ಳದಿದ್ದರೆ ಮುಖ್ಯಮಂತ್ರಿ ವಿರುದ್ದ ಘೋರ ಹೋರಾಟ ಮಾಡುತ್ತೇವೆ. ಸ್ನೇಹಿತರೇ, ಪ್ರತಿಭಟನೆಗೆ ತಯಾರಿ ಆರಂಭಿಸಿ” ಚಂದ್ರಶೇಖರ ಹೇಳಿದ್ದರು.

You might also like
Leave a comment