This is the title of the web page

ನಿಪ್ಪಾಣಿ ಘಾಟ್ ನಲ್ಲಿ ಮತ್ತೊಂದು ಭೀಕರ ಅಪಘಾತ; ೪ ಸಾವು

ಬೆಳಗಾವಿ, 27- ನಿಪ್ಪಾಣಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಪಾಯಕರ ಸ್ಥವನಿಧಿ ಘಾಟನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಕಂಟೇನರ್ ಟ್ರಕ್ ಹಾಗು ಕಾರು ನಡುವೆ ಢಿಕ್ಕಿ ಸಂಭವಿಸಿ ಕಾರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನಿಪ್ಪಾಣಿ ಬಳಿಯ ಸ್ಥವನಿಧಿ ಘಾಟ್‍ನ ಇಳಿಜಾರಿನ ತಿರುವಿನಲ್ಲಿ ಮುಂಜಾನೆ ಸುಮಾರು 10.30ಕ್ಕೆ ಈ ದುರ್ಘಟನೆ ನಡೆದಿದ್ದು, ಛಾಯಾ ಅದಗೌಡ ಪಾಟೀಲ(55), ಅದಗೌಡ ಬಾಬು ಪಾಟೀಲ(55), ಮಹೇಶ ಪಾಟೀಲ(23) ಚಂಪಾತಾಯಿ ಮಗದುಮ್ಮ(80) ಅವರು ಸ್ಥಳದಲ್ಲೇ ಅಸು ನೀಗಿದ್ದಾರೆ. ಮೃತರೆಲ್ಲರು ಚಿಕ್ಕೋಡಿ ತಾಲೂಕಿನ ಬೋರಗಾಂವವಾಡಿ ನಿವಾಸಿಗಳು ಎಂದು ಹೇಳಲಾಗಿದೆ.

ಮೃತರು ನಿಪ್ಪಾಣಿಯ ಹತ್ತಿರ ಸ್ಥವನಿಧಿ ಗ್ರಾಮಕ್ಕೆ ಮದುವೆಗೆ ಹೊರಟಿದ್ದರು. ವಧುವಿನ ಸಹೋದರ ಮಹೇಶ ಎನ್ನುವವರು ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಂಟೇನರ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ ವರಿಷ್ಠ ಲಕ್ಷ್ಮಣ ನಿಂಬರಗಿ, ಡಿವೈಎಸ್‍ಪಿ ಬಸವರಾಜ ಯಲಿಗಾರ, ಸಿಪಿಐ ಸಂಗಮೇಶ ಶಿವಯೋಗಿ, ಪಿಎಸ್‍ಐ ಕೃಷ್ಣವೇಣಿ ಅವರುಗಳು ಗುರ್ಲಹೊಸೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You might also like
Leave a comment