This is the title of the web page

ಮುರುಡೇಶ್ವರ ಸಮುದ್ರದಲ್ಲಿ ಮತ್ತೊಬ್ಬ ಪ್ರವಾಸಿಗನ ಸಾವು 

 

ಭಟ್ಕಳ: ಮುರುಡೇಶ್ವರ ಸಮುದ್ರದಲ್ಲಿ ಮತ್ತೊಬ್ಬ ಪ್ರವಾಸಿಗ ಮುಳುಗಿ ಮೃತ ಪಟ್ಟ ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ನಿವಾಸಿ ಮಹೇಶ ಶಿವಶಂಕರಪ್ಪ (33) ಸಾವಿಗೀಡಾದ ವ್ಯಕ್ತಿ.

ಸ್ನೇಹಿತರೊಂದಿಗೆ ಕಾರಿನಲ್ಲಿ ಬಂದು ಸಿಗಂದೂರು, ಜೋಗ ಫಾಲ್ಸ ಪ್ರವಾಸ ಮುಗಿಸಿ ಮುರ್ಡೇಶ್ವರಕ್ಕೆ ಅವರು ಬಂದಿದ್ದರು.

ರವಿವಾರ ಮುರ್ಡೇಶ್ವರ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ದೊಡ್ಡ ಅಲೆಯೊಂದು ಬಂದು ಮಹೇಶನನ್ನು ಕೊಚ್ಚಿಕೊಂಡು ಹೋಯಿತು. ತಕ್ಷಣ ಮೀನುಗಾರರು ಆತನನ್ನು ರಕ್ಷಣೆ ಮಾಡಿದರಾದರೂ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮೃತ ಪಟ್ಟನು. ಸ್ನೇಹಿತರು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

You might also like
Leave a comment