This is the title of the web page

ಕಾರು ಅಪಘಾತದಲ್ಲಿ ಆಸ್ಟ್ರೇಲಿಯದ ದಿಗ್ಗಜ ಆಲ್ ರೌಂಡರ್ ಆಂಡ್ರ್ಯೂ ಸೈಮಂಡ್ಸ ಸಾವು

ಸಿಡ್ನಿ, ೧೫- ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಖ್ಯಾತ ಮಾಜಿ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ‌ ಅವರು ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಹೊರವಲಯದಲ್ಲಿ ಎಂಬಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಸೈಮಂಡ್ಸ ಸಾವನ್ನಪ್ಪಿದ್ದಾರೆ.

ಶನಿವಾರ ರಾತ್ರಿ 11ರ ಸುಮಾರಿಗೆ ಹಾರ್ವೇ ರೇಂಜ್‌ ರಸ್ತೆಯಲ್ಲಿ ಸೈಮಂಡ್ಸ ಅವರ‌ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಾರಿನಲ್ಲಿ ಸೈಮಂಡ್ಸ‌ ಒಬ್ಬರೇ ಇದ್ದರು. ಅಲೈಸ್‌ ರಿವರ್‌ ಬ್ರಿಡ್ಜ್‌ ಸಮೀಪ ನಿಯಂತ್ರಣ ತಪ್ಪಿದ ಕಾರು ರಸ್ತೆಯಿಂದ ಹೊರಗೆ ಬಂದು ಪಲ್ಟಿಯಾಗಿದೆ.

ತುರ್ತು ಸೇವಾ ತಂಡವು ಸೈಮಂಡ್ಸ‌ ಅವರ ಜೀವ ಉಳಿಸಲು ಪ್ರಯತ್ನ ನಡೆಸಿತಾದರೂ ಸಫಲವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

46 ವರ್ಷದ ಸೈಮಂಡ್ಸ ಅವರು‌ 26 ಟೆಸ್ಟ್‌, 198 ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. 1998ರಿಂದ 2009 ನಡುವೆ ಒಟ್ಟು 198 ಏಕದಿನ, 26 ಟೆಸ್ಟ್‌ ಹಾಗೂ 14 ಟಿ-20 ಪಂದ್ಯಗಳಲ್ಲಿ ಸೈಮಂಡ್ಸ‌ ಆಸ್ಟ್ರೇಲಿಯಾ ತಂಡವನ್ನು ಪ್ರತಿನಿಧಿಸಿದ್ದರು. 2003 ಮತ್ತು 2007ರ ವಿಶ್ವಕಪ್‌ ಗೆಲುವಲ್ಲಿ ಸೈಮಂಡ್ಸ ಅವರು ಪ್ರಮುಖ ಪಾತ್ರವಹಿಸಿದ್ದರು

You might also like
Leave a comment