This is the title of the web page

ರಸ್ತೆ ಅಪಘಾತದಲ್ಲಿ ವೈದ್ಯ ದಂಪತಿ, ಮಗಳ ಸಾವು

ಬೆಳಗಾವಿ, 13- ರಸ್ತೆಬದಿ ನಿಂತಿದ್ದ ಲಾರಿಗೆ ವೇಗದಿಂದ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸಂಕೇಶ್ವರದ ಸ್ತ್ರೀ ರೋಗ ತಜ್ಞೆ ಡಾ. ಶ್ವೇತಾ ಮುರಗೋಡ, ಪತಿ ಡಾ. ಸಚಿನ ಮುರಗೋಡ ಹಾಗು ಅವರ ಮಗಳು 12 ವರುಷದ ಶ್ರೇಯಾ ಸಾವಿಗೀಡಾಗಿದ್ದಾರೆ. ಡಾ. ಶ್ವೇತಾ ಅವರಿಗೆ 38 ವರ್ಷ ವಯಸ್ಸಾಗಿತ್ತು.

ಬೆಳಗಾವಿಗೆ ಹೋಗಿ ಸಂಕೇಶ್ವರಗೆ ಹಿಂದಿರುಗುತ್ತಿದ್ದ ಡಾ. ಮುರಗೋಡ ಕುಟುಂಬವಿದ್ದ ಕಾರು ಬೆನಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ರಭಸವಾಗಿ ಅಪ್ಪಳಿಸಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ನುಜ್ಜು- ಗುಜ್ಜಾಗಿ ತಾಯಿ ಮತ್ತು ಮಗಳು ತಕ್ಷಣ ಸಾವಿಗೀಡಾದರು.

ಡಾ. ಶ್ವೇತಾ ಅವರ ಪತಿ ಡಾ. ಸಚಿನ ಮುರಗೋಡ ಅವರಿಗೆ ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ರವಿವಾರ ರಾತ್ರಿ ಕೊನೆಯುಸಿರೆಳೆದರು.

ಅಪಘಾತದ ಪ್ರಕರಣ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

You might also like
Leave a comment