This is the title of the web page

ನಾಲ್ಕು ಚಿಕ್ಕ ಮಕ್ಕಳು ಸೇರಿದಂತೆ ಐವರನ್ನು ಕೊಚ್ಚಿ ಕೊಂದ ರಾಕ್ಷಸರು

ಮಂಡ್ಯ, 6- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಗ್ರಾಮದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.

ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ಜಾವದಲ್ಲಿ ಈ ಘಟನೆ ಸಂಭವಿಸಿದೆ. ಕೊಲೆಯಾದವರನ್ನು ಲಕ್ಷ್ಮಿ, (26 ವರ್ಷ) ರಾಜು (12 ವರ್ಷ), ಕೋಮಲ್ (7 ವರ್ಷ), ಕುನಾಲ್ (4 ವರ್ಷ) ಹಾಗೂ ಗೋವಿಂದ (8 ವರ್ಷ) ಎಂದು ಗುರುತಿಸಲಾಗಿದೆ.

ಮಾರಾಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದ್ದು ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಘಟನೆಯಿಂದ ಇಡೀ ಶ್ರೀರಂಗಪಟ್ಟಣ ತಾಲೂಕು ಬೆಚ್ಚಿಬಿದ್ದಿದೆ.

ಜಿಲ್ಲಾ ಪೋಲೀಸರು ತನಿಖಾ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

You might also like
Leave a comment