This is the title of the web page

ಡಿಸಿಸಿ ಬ್ಯಾಂಕ ತಿಜೋರಿ, ಲಾಕರ್ ಲೂಟಿ ಮಾಡಿದವರ ಬಂಧನ

ಬೆಳಗಾವಿ, 13- ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಭಾರಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು ಕಳ್ಳರನ್ನು ಬಂಧಿಸಿದ್ದಾರೆ. ಬ್ಯಾಂಕ್ ಗುಮಾಸ್ತನೇ ಕಳ್ಳತನದ ಮುಖ್ಯ ಸೂತ್ರದಾರನಾಗಿದ್ದು ತನ್ನಿಬ್ಬರು ಸ್ನೇಹಿತರಿಂದ ಕಳೆದ ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆಯವರೆಗೆ ಕಳ್ಳತನ (ಮಾರ್ಚ 6) ಮಾಡಿಸಿದ್ದ.

ರಾಮದುರ್ಗ ತಾಲ್ಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ಬ್ಯಾಂಕ್ ಉದ್ಯೋಗಿ ಬಸವರಾಜ ಸಿದಲಿಂಗಪ್ಪ ಹುಣಶೀಕಟ್ಟಿ ಎಂಬವ ಬ್ಯಾಂಕಿನ ಎಲ್ಲ ಬೀಗದ ಕೈಗಳನ್ನು ತನ್ನಿಬ್ಬರು ಮಿತ್ರರಾದ ಯಾರಗಟ್ಟಿಯ ಸಂತೋಷ ಕಲ್ಲಪ್ಪ ಕುಂಬಾರ ಹಾಗು ಸವದತ್ತಿ ತಾಲೂಕಿನ ಜೀವಾಪುರದ ಯಮುನಪ್ಪ ಲಕ್ಶ್ಮಣ ಬೆಳವಾಲ ಅಲಿಯಾಸ್ ಗಿರೀಶ ಅವರಿಗೆ ಕೊಟ್ಟು ಅವುಗಳ ಡೂಪ್ಲಿಕೇಟ್ ಕೀಗಳನ್ನು ಮಾಡಿಸಿ ಒರಿಜಿನಲ್ ಕೀ ಗಳನ್ನು ಬ್ಯಾಂಕ್ ನಲ್ಲಿ ಅವುಗಳನ್ನು ಇಡುವ ಸ್ಥಳದಲ್ಲಿ ಪುನಃ ಇರಿಸಿದ್ದ.

ಕಳೆದ ಶನಿವಾರ ರಾತ್ರಿ ನಕಲಿ ಬೀಗದ ಕೀಲಿ ಕೈ ಬಳಸಿ ಬ್ಯಾಂಕ್ ಪ್ರವೇಶಿಸಿದ ಮೂವರು ಡುಪ್ಲಿಕೇಟ್ ಕೀ ಗಳನ್ನು ಬಳಸಿ ತಿಜೋರಿ ಹಾಗು ಲಾಕರಗಳನ್ನು ತೆರೆದು 4 ಕೋಟಿ ನಗದು ಹಾಗು 1.5 ಕೋಟಿ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದರು. ಕಳ್ಳತನವಾದ ಎಲ್ಲ ಹಣ ಮತ್ತು ಒಡವೆಗಳನ್ನು ಮರಳಿ ಪಡೆಯಲಾಗಿದೆ.

ಮುಂಜಾನೆ ಬ್ಯಾಂಕ್ ನ ಬಾಗಿಲು ತೆರೆದಿರುವದನ್ನು ಕಂಡ ಜನ ಪೊಲೀಸರಿಗೆ ತಿಳಿಸಿದಾಗ ಕಳ್ಳತನದ ಕುರಿತು ಗೊತ್ತಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕಳ್ಳರ ಪತ್ತೆಗೆ ನಾಲ್ಕು ತಂಡ ರಚಿಸಿದ್ದರು. ಕಳ್ಳತನವಾದ ಬಗ್ಗೆ ಮೇಲ್ನೋಟಕ್ಕೆ ಬ್ಯಾಂಕಿನವರ ಸಹಾಯವಿಲ್ಲದೇ ಆಗಿರಲಾರದು ಎಂದುಕೊಂಡು ತನಿಖೆ ನಡೆಸಿದ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾಂಕ್ ಮ್ಯಾನೇಜರ್ ಪ್ರಮೋದ ಯಲಿಗಾರ ಅವರು ದೂರು ದಾಖಲಿಸಿದ್ದರು.

You might also like
Leave a comment