This is the title of the web page

ಕಳ್ಳರ ಬಂಧನ; ವಿವಿಧ ವಸ್ತುಗಳು ವಶ

 

ಬೆಳಗಾವಿ, ೧೦- ದ್ವಿಚಕ್ರ ವಾಹನಗಳ ಬಿಡಿಭಾಗಗಳು ಮತ್ತು ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ನಿಪ್ಪಾಣಿ ಪೊಲೀಸರು ಬಂಧಿಸಿ ಒಂದು ಕಾರು ಸೇರಿದಂತೆ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಕದ್ದ ವಿವಿಧ ವಸ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ನಿಪ್ಪಾಣಿ ಪಟ್ಟಣವಲ್ಲದೇ ತಾಲೂಕಿನ ವಿವಿಧ ಭಾಗಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಬಿಡಿಭಾಗಗಳನ್ನು ತೆಗೆದು ಸ್ಕ್ರಾಪ್ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 27 ವರ್ಷದ ನಿಹಾಲ್ ಅಸ್ಲಮ ಬಾಲೇಖಾನ ಹಾಗು 47 ವರುಷದ ರಮಿಜ ದಸ್ತಗೀರ ಮಲ್ಲೋಡಿ ಎಂಬವರನ್ನು ಬಂಧಿಸಿ ಅವರಿಂದ ಅವರು ಕದ್ದ ಚಿನ್ನಾಭರಣ ಸೇರಿದಂತೆ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ. ವಶ ಪಡಿಸಿಕೊಂಡ ವಸ್ತುಗಳ ಒಟ್ಟು ಮೊತ್ತ 4.13 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.

You might also like
Leave a comment