This is the title of the web page

ಧಾರವಾಡದಲ್ಲಿ ಊಟದ ಜಗಳ ಬಿಡಿಸಲು ಹೋದವನೇ ಸತ್ತ!

ಧಾರವಾಡ ಮಾ.09- ಮದುವೆಯಲ್ಲಿ ಊಟದ ವಿಚಾರವಾಗಿ ನಡೆದ ಜಗಳ ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರುವ ಘಟನೆ ನಗರದ ಪೆಂಡಾರ್ ಗಲ್ಲಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸಾದಿಕ್ ಮೋತಿಲಾಲ ಬಿಡ್ನಾಳ (40) ಎಂಬುವನೇ ಸಾವನ್ನಪ್ಪಿದ ದುರ್ದೈಯಾಗಿದ್ದಾನೆ. ಪೆಂಡಾರ್ ಗಲ್ಲಿಯ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆಯಲ್ಲಿ ಊಟದ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಆಗ ಜಗಳ ಬಿಡಿಸಲು ಹೋಗಿ ಗಲಾಟೆಯಲ್ಲಿ ಸಾದಿಕ್ ಸಿಲುಕಿದ್ದರಿಂದ ಆತನ ತಲೆಗೆ ಪೆಟ್ಟು ಬಿದ್ದಿತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಶಹರ ಠಾಣೆಯ ಸಿಪಿಐ ಸಂಗಮೇಶ ದಿಡಿಗಿನಾಳ ಅವರು ಭೇಟಿ ನೀಡಿದ್ದರು. ಗಲಾಟೆ ನಡೆಸಿದನೆನ್ನಲಾದ ರಿಜ್ವಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

You might also like
Leave a comment