Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ನಾನು ಛೀ.. ಥೂ ಅನ್ನಿಸಿಕೊಂಡು ಸರ್ಕಾರ ನಡೆಸಲಿಲ್ಲ : ಸಿದ್ದರಾಮಯ್ಯ 


ಮಂಡ್ಯ: ನಾನು ಯಾರಿಂದಲೂ ಏನೆಲ್ಲ ಅನಿಸಿಕೊಂಡು ಈ ರೀತಿ ಅಧಿಕಾರ ನಡೆಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ಹುಲಿಯಾರಮ್ಮ ದೇವಸ್ಥಾನ ಲೋಕಾರ್ಪಣೆಯನ್ನು ಈ ವೇಳೆ ಮಾತನಾಡಿದ ಅವರು, ಜನರು ಅಶೀರ್ವಾದ ಮಾಡಿದ್ದರಿಂದ 5 ವರ್ಷ ಮುಖ್ಯಮಂತ್ರಿ ಆಗಿದ್ದೆ. ಯಾರಿಂದಲೂ ಈ ರೀತಿ ಛೀ, ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. 158 ಭರವಸೆಗಳನ್ನೂ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ನಾನು ಜಾತಿಗಳಿಗೆ ಅಧಿಕಾರ ಮಾಡಲಿಲ್ಲ. ಅಕ್ಕಿ , ಹಾಲು , ಶೂ ಸಮವಸ್ತ್ರ ಎಲ್ಲಾ ಧರ್ಮದ , ಜಾತಿವರಿಗೂ ಉಪಯೋಗವಾಗಿದೆ ಎಂದರು.

ಆದರೆ ಬಿಜೆಪಿ ಸರ್ಕಾರ ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ವಿದ್ಯಾರ್ಥಿ ವೇತನ ಕೊಟ್ಟಿಲ್ಲ. ಈ ಬಗ್ಗೆ ಎಸ್ಸಿ-ಎಸ್ಟಿ ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಹೀಗಿರುವಾಗಿ ಎಸ್ಸಿ-ಎಸ್ಟಿ ಸಮುದಾಯಗಳ ಬಗ್ಗೆ ಮಾತನಾಡುವುದಕ್ಕೆ ಇವರಿಗೆ ಯಾವ ನೈತಿಕತೆಯಿದೆ ಎಂದು ಪ್ರಶ್ನಿಸಿದ್ದಾರೆ.


A B Dharwadkar
the authorA B Dharwadkar

Leave a Reply