This is the title of the web page

ಅಂಬೇಡ್ಕರ ಫೋಟೋಗೆ ಪುಷ್ಪಾರ್ಚನೆ ಮಾಡಲು ನಿರಾಕರಿಸಿದ ಜಿಲ್ಲಾ ನ್ಯಾಯಾಧೀಶ

ರಾಯಚೂರು, 26- ‘ಮಹಾತ್ಮಾ ಗಾಂಧಿ ಭಾವಚಿತ್ರದ ಜೊತೆಗೆ ಅಂಬೇಡ್ಕರ ಭಾವಚಿತ್ರ ಕೂಡ ಇಟ್ಟು ಪುಷ್ಪಾರ್ಚನೆ ಮಾಡಬೇಕೆಂಬ ಆದೇಶ ನನಗೆ ಬಂದಿಲ್ಲ, ಅಂಬೇಡ್ಕರ ಫೋಟೋ ತೆಗೆದರೆ ಮಾತ್ರ ಪುಷ್ಪಾರ್ಚನೆ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ,’ ಎಂದು ಪಟ್ಟು ಹಿಡಿದು ಅಂಬೇಡ್ಕರ ಫೋಟೋ ತೆಗೆಯಿಸಿ ಪುಷ್ಪಾರ್ಚನೆ ಮಾಡಿದ ಘಟನೆ ರಾಯಚೂರು ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ನಡೆದಿದೆ.

ಇಂದು ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ‌ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು  ಅಂಬೇಡ್ಕರ‌ ಫೋಟೋ ತೆಗೆಯಲು ಪಟ್ಟು ಹಿಡಿದರು. ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ‌‌ ಫೋಟೋ ತೆಗೆಯಬೇಕಾಯಿತು.

ಈ ಘಟನೆಯನ್ನು ಸ್ಥಳದಲ್ಲೇ ವಿರೋಧಿಸಿದ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದಾರೆ.

You might also like
Leave a comment