This is the title of the web page

ಡಾ. ಚನ್ನವೀರ ಕಣವಿ ನಿಧನ

ಧಾರವಾಡ, ಫೆ 16-‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಸಾರಿದ ಕನ್ನಡದ ಹಿರಿಯ ಕವಿ ಚನ್ನವೀರ ಕಣವಿ ದೀರ್ಘಕಾಲದ ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ಡಾ. ಚೆನ್ನವೀರ ಕಣವಿ ಅವರು ಧಾರವಾಡ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಾಡೋಜ ಚೆನ್ನವೀರ ಕಣವಿ ಅಗಲಿಕೆಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಆರೋಗ್ಯ ಸಚಿವ ಡಾ ಕೆ ಸುಧಾಕರ ಅವರು ಚೆನ್ನವೀರ ಕಣವಿ ಅಗಲಿಕೆಗೆ ಸಂತಾಪಿಸಿ ಟ್ವೀಟ್ ಮಾಡಿದ್ದು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂದು ಏಳು ದಶಕಗಳ ಕಾಲ ಕನ್ನಡದ ಸಾಹಿತ್ಯ ಕೃಷಿ ಮಾಡಿದ ಸಮನ್ವಯ ಕವಿ ನಾಡೋಜ ಶ್ರೀ ಚನ್ನವೀರ ಕಣವಿಯವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಅವರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳಿಗೆ, ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಬರೆದಿದ್ದಾರೆ.

You might also like
Leave a comment