This is the title of the web page

ಆತ್ಮಜ್ಞಾನ ಪಡೆಯಲು ಗುರುವಿನ ಸಹಾಯ ಅಗತ್ಯ -ಡಾ. ಎಸ್.ಆರ್.ರಾಮನಗೌಡರ

ಧಾರವಾಡ ಫೆ.04- ಆತ್ಮಜ್ಞಾನಿಯಾದ ಗುರುವು ಶಿಷ್ಯಂದಿರನ್ನು ಸಾಧನೆಯ ಪಥದಲ್ಲಿ ನಡೆಸುವ ಮಾರ್ಗದರ್ಶಿಯಾಗಿ, ಅವರ ಹೃದಯದೊಳಗಿನ ತಾಪಗಳನ್ನೆಲ್ಲ ಪರಿಹರಿಸುತ್ತಾ ಅವರಿಗೆ ಆತ್ಮಜ್ಞಾನ ಪಡೆಯಲು ಸಹಾಯ ಮಾಡುತ್ತಾನೆ ಎಂದು ಸುಶ್ರುತ ವೈದ್ಯ ಡಾ.ಎಸ್.ಆರ್.ರಾಮನಗೌಡರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು, ಪ್ರೊ.ಬಸಯ್ಯ ಶಿವಯ್ಯ ಶಿರೋಳ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಶ್ರೀ ಗುರು ಗೀತಾ’ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆ ವೇದವ್ಯಾಸ ರಚಿತ `ಶ್ರೀ ಗುರುಗೀತಾ’ ಎಂಬ ಸದ್ಗ್ರಂಥದ ಎಲ್ಲ ವಿವರಗಳನ್ನು ಹತ್ತು ಹಲವು ಶ್ಲೋಕಗಳನ್ನು ಅರ್ಥ ಸಹಿತವಾಗಿ ಉದ್ಧರಿಸುತ್ತ ಡಾ.ರಾಮನಗೌಡರ ಅವರು ಉಪನ್ಯಾಸ ಮಾಡಿದರು.

ಮನೋವೈದ್ಯ ಡಾ.ಆನಂದ ಪಾಂಡುರಂಗಿ ಅವರು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ರಾಮನಗೌಡರ ಅವರ ಮಾತುಗಳನ್ನು ವಿಶ್ಲೇಷಿಸುತ್ತಾ ಗುರುವೇ ಪ್ರತಿಯೊಬ್ಬರ ಬದುಕಿನ ಅತ್ಯಂತ ಮುಖ್ಯವ್ಯಕ್ತಿ ಎಂದು ಹೇಳಿದರು.

ದತ್ತಿ ದಾನಿಗಳಾದ ಪ್ರೊ. ಬಿ. ಎಸ್. ಶಿರೋಳ ಅವರು ಡಾ.ರಾಮನಗೌಡರ ಅವರ ಆಧ್ಯಾತ್ಮಿಕ ಅಧ್ಯಯನ ಚಿಂತನ ಮತ್ತು ಸಾಧನೆಯ ಬಗ್ಗೆ ಪರಿಚಯಿಸೇರಿದಂತೆ ಸಂದರ್ಭದಲ್ಲಿ ಡಾ.ಎಸ್.ಆರ್.ರಾಮನಗೌಡರ ಹಾಗೂ ಅವರ ಧರ್ಮಪತ್ನಿಯವರನ್ನು ಸನ್ಮಾನಿಸಲಾಯಿತು.

ಬಾಲಬಳಗ ಶಾಲೆಯ ಶೃತಿ ಮತ್ತು ತನ್ಮಯಿ ಸ್ವಾಗತ ಗೀತೆ ಹಾಡಿದರು. ಡಾ. ಸಂಜೀವ ಕುಲಕರ್ಣಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.ಕಾ ರ್ಯಕ್ರಮದಲ್ಲಿ ಶಂಕರ ಹಲಗತ್ತಿ, ಗುರು ಹಿರೇಮಠ, ಡಾ.ಶ್ರೀಶೈಲ ಹುದ್ದಾರ, ನಿಂಗಣ್ಣ ಕುಂಟಿ, ಪ್ರೊ.ಐ.ಜಿ. ಸನದಿ, ಡಾ.ಡಿ.ಎಂ.ಹಿರೇಮಠ, ಡಾ.ಸಂಗಮನಾಥ ಲೋಕಾಪೂರ, ಜಿ.ಬಿ.ಹೊಂಬಳ, ಡಾ.ಆನಂದ ಪಾಟೀಲ, ಡಾ.ಲಿಂಗರಾಜ ಅಂಗಡಿ, ಶಶಿಧರ ತೋಡಕರ, ಐ.ಕೆ. ಬಳ್ಳೂರ, ಎಸ್.ಬಿ.ಗುತ್ತಲ, ಸಿ.ಎಸ್.ಪಾಟೀಲ, ರಾಮಚಂದ್ರ ಧೋಂಗಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

 

You might also like
Leave a comment