This is the title of the web page

ಕುಡಿದು ವಾಹನ ಚಲಾಯಿಸುವುದು ದುರ್ನಡತೆ ಅಲ್ಲದೇ ಅಪರಾಧವೂ ಹೌದು

ಹೊಸದಿಲ್ಲಿ, 27- ಸಾರಾಯಿ ಕುಡಿದು ವಾಹನ ಚಾಲನೆ ಮಾಡುವುದು ಗಂಭೀರವಾದ ದುರ್ನಡತೆ ಅಲ್ಲದೇ ಅದೊಂದು ಅಪರಾಧವಾಗಿದೆ ಎಂದು ಸುಪ್ರೀಮ ಕೋರ್ಟ ಹೇಳಿದೆ.

ಉತ್ತರ ಪ್ರದೇಶದ ಪ್ರಾಂತೀಯ ಸಶಸ್ತ್ರ ಪೊಲೀಸ್‌ (ಪಿಎಸಿ) ಪಡೆಯನ್ನು ಕರೆದೊಯ್ದ ಟ್ರಕ್‌ನ ಚಾಲಕನೊಬ್ಬ ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಬಿ.ವಿ.ನಾಗರತ್ನಾ ಅವರಿದ್ದ ನ್ಯಾಯಪೀಠ ನಡೆಸಿತು.

‘ಮದ್ಯ ಕುಡಿದ ಯಾವ ವ್ಯಕ್ತಿಗೂ ವಾಹನ ಚಾಲನೆ ಮಾಡಲು ಅನುಮತಿ ನೀಡಬಾರದು. ಸಾರಾಯಿ ಕುಡಿದು ವಾಹನ ಚಾಲನೆ ಮಾಡುವುದು ಇತರರ ಜೀವಗಳೊಂದಿಗೆ ಚೆಲ್ಲಾಟವಾಗುವುದು ಗಂಭೀರವಾದ ದುರ್ನಡತೆ ಮತ್ತು ಅಪರಾಧ ಎಂದು ಬುಧವಾರ ನ್ಯಾಯಾಲಯ ಹೇಳಿತು.

2000ದಲ್ಲಿ ಕುಂಭ ಮೇಳಕ್ಕೆ ಅಲಹಾಬಾದ್‌ನಿಂದ ಪೊಲೀಸ್‌ ಸಿಬ್ಬಂದಿಯನ್ನು ಕರೆದೊಯ್ಯುವಾಗ, ಕುಡಿದು ವಾಹನ ಚಾಲನೆ ಮಾಡಿದ್ದ ಎಂಬ ಆರೋಪ ಎದುರಿಸುತ್ತಿರುವ ಟ್ರಕ್‌ ಚಾಲಕನಿಗೆ ಕಡ್ಡಾಯ ನಿವೃತ್ತಿ ನೀಡಬೇಕು’ ಎಂದು ನ್ಯಾಯಪೀಠ ಆದೇಶಿಸಿತು.

You might also like
Leave a comment