This is the title of the web page

ಅಂಡಮಾನ್-ನಿಕೋಬಾರ್ ದಲ್ಲಿ ಭೂಕಂಪ

ಪೋರ್ಟ ಬ್ಲೇರ್, 10- ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ರವಿವಾರ ಬೆಳಿಗ್ಗೆ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.9ರಷ್ಟು ದಾಖಲಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಮಾಹಿತಿ ನೀಡಿದೆ.

ಸದ್ಯಕ್ಕೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳು ಬಂದಿಲ್ಲ. ರವಿವಾರ ಬೆಳಿಗ್ಗೆ 7.02ರ ಸುಮಾರಿಗೆ ಕಂಪನ ಕಂಡು ಬಂದಿದೆ. ಸದ್ಯಕ್ಕೆ ಯಾವುದೇ ಸುನಾಮಿ ಅಲರ್ಟ ನೀಡಲಾಗಿಲ್ಲ.

ಸಮಯ ಸುಮಾರು 07:02:26, ಅಕ್ಷಾಂಶ: 7.50 ಮತ್ತು ರೇಖಾಂಶ: 94.31, ಆಳ: 10 ಕಿಮೀ ,ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪಬೆಲ್ ಬೇ ಇಂದ 70ಕಿಮೀ ಈಶಾನ್ಯಕ್ಕೆ ಈ ಭೂಕಂಪ ಸಂಭವಿಸಿದೆ.

You might also like
Leave a comment