ವಿಜಯಪುರ, 22 : ವಿಜಯಪುರ ಜಿಲ್ಲೆಯಲ್ಲಿ ಭೂಕಂಪ ಸಂಭವಿಸಿದ್ದು ಭೂಕಂಪದ ತೀವ್ರತೆಗೆ ಮನೆಗಳಲ್ಲಿನ ಪಾತ್ರೆಗಳು, ವಸ್ತುಗಳು ನೆಲಕ್ಕೆ ಬಿದ್ದಿದ್ದು, ಭಾರಿ ಶಬ್ಧ ಕೇಳಿ ಜನರು ಪ್ರಾಣ ಭಯದಲ್ಲಿ ಹೊರಗೋಡಿ ಬಂದರು.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ, ಕಳ್ಳಕವಟಗಿ, ಘೋಣಸಗಿ, ಹುಬನೂರ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ. ಅದರಂತೆ ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳಾದ ಮೊರಬಗಿ, ತಿಕ್ಕುಂಡಿ, ಆಸಂಗಿಯಲ್ಲೂ ಭೂಮಿ ನಡುಗಿದ ಅನುಭವ ಆಗಿದೆ.
ಮಂಗಳವಾರ ಬೆಳಿಗ್ಗೆ 11:29ರ ಸುಮಾರಿಗೆ ಜೋರಾದ ಶಬ್ದದೊಂದಿಗೆ ಭೂಮಿ ಕಂಪಿಸಿದ ಅನುಭವ ಆಯಿತು. ಭೂಮಿ ಕಂಪಿಸಿದ್ದರಿಂದ ಅಡುಗೆ ಮನೆಯಲ್ಲಿನ ಪಾತ್ರೆಗಳು ಕೆಳಗೆ ಬಿದ್ದಿವೆ. ಜೋರು ಶಬ್ದದಿಂದ ಹೆದರಿ ಜನರು ಮನೆಯಿಂದಾಚೆಗೆ ಓಡಿ ಬಂದರು.