This is the title of the web page

ಇಂದು ಮತ್ತೆ ಇಡಿ ವಿಚಾರಣೆ ಎದುರಿಸಲಿರುವ ರಾಹುಲ್ ಗಾಂಧಿ 

 

 

ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಇಂದು ಮತ್ತೆ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲಿದ್ದಾರೆ .

ರಾಹುಲ್‌ ಗಾಂಧಿ ಅವರನ್ನು ಜೂನ್ 13 ರಿಂದ 15 ರವರೆಗೆ ವಿಚಾರಣೆಗೆ ಒಳಪಡಿಸಿತ್ತು. ನಂತರ ಜೂನ್ 17 ಮತ್ತೆ ಹಾಜರಾಗುವಂತೆ ಇಡಿ ಸಮನ್ಸ್‌ ನೀಡಿತ್ತು.

ಆದರೆ, ತಾಯಿ ಸೋನಿಯಾ ಗಾಂಧಿ ಅವರ ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ, 4 ದಿನ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ರಾಹುಲ್‌ ಇಡಿ ಅಧಿಕಾರಿಗಳಿಗೆ ವಿನಂತಿಸಿದ್ದರು.

ಇದಕ್ಕೆ ಇಡಿ ಅಧಿಕಾರಿಗಳೂ ಕೂಡ ಸಮ್ಮತಿ ನೀಡಿ, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಇಡಿ ಹೊಸ ಸಮನ್ಸ್ ನೀಡಿತ್ತು. ಇದೀಗ ನೀಡಿದ್ದ 4 ದಿನಗಳ ಗಡುವು ಮುಗಿದಿದ್ದು, ಇಂದು ರಾಹುಲ್‌ ಇಡಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ.

ಕಾಂಗ್ರೆಸ್ ಇದನ್ನು ಖಂಡಿಸಿ‌ ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸಲಿದೆ

You might also like
Leave a comment