This is the title of the web page

ಫೆ. 10 ರಿಂದ ಐದು ರಾಜ್ಯಗಳಲ್ಲಿ ಚುನಾವಣೆ

ಹೊಸದಿಲ್ಲಿ, 8- ಏರುತ್ತಿರುವ ಕೋವಿಡ್ ಪ್ರಕರಣಗಳ ಆತಂಕದ ನಡುವೆಯೇ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಶನಿವಾರ ಘೋಷಣೆ ಮಾಡಿದ್ದು ಫೆಬ್ರುವರಿ 10 ರಿಂದ ಮಾರ್ಚ 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಮುಖ್ಯ ಚುನಾವಣಾ ಆಯುಕ್ತ ಸುಶೀಲ ಚಂದ್ರ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭೆ ಚುನಾವಣೆಯು ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಮಾರ್ಚ 7ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ ಎಂದು ಘೋಷಣೆ ಮಾಡಿದರು.

ಉತ್ತರ ಪ್ರದೇಶದಲ್ಲಿ ಏಳೂ ಹಂತದಲ್ಲಿ ಚುನಾವಣೆ ನಡೆಯಲಿದ್ದರೆ, ಮಣಿಪುರದಲ್ಲಿ ಎರಡು ಹಂತದಲ್ಲಿ ನಡೆಯಲಿದೆ. ಉಳಿದಂತೆ ಗೋವಾ, ಪಂಜಾಬ ಹಾಗೂ ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ 10 ರಂದು ಫಲಿತಾಂಶ ಪ್ರಕಟವಾಗಲಿದೆ.

403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಏಳು ಹಂತದಲ್ಲಿ (ಫೆಬ್ರವರಿ 10, 14, 20, 23, 27 ಮಾರ್ಚ 3, 7) 117 ಕ್ಷೇತ್ರಗಳಿರುವ ಪಂಜಾಬ್, 70 ಕ್ಷೇತ್ರಗಳಿರುವ ಉತ್ತರಾಖಂಡ ಹಾಗೂ 40 ಕ್ಷೇತ್ರಗಳಿರುವ ಗೋವಾದಲ್ಲಿ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದೆ. ಈಶಾನ್ಯ ರಾಜ್ಯ ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 27 ಹಾಗೂ ಮಾರ್ಚ 3 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ 10 ರಂದು ಚುನಾವಣೆಯ ಫಲಿತಾಂಶವನ್ನು ಆಯೋಗ ಪ್ರಕಟಿಸಲಿದೆ.

ರಾಜ್ಯಗಳ 690 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 18.34 ಕೋಟಿ ಮತದಾರರು ಈ ಬಾರಿಯ ಹಕ್ಕು ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ಆಯೋಗ ಹೇಳಿದೆ.
ಈ ಎಲ್ಲಾ ರಾಜ್ಯಗಳಿಂದ 24.5 ಲಕ್ಷ ಹೊಸ ಮತದಾರರು ಇದೇ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ ಎಂದು ತಿಳಿಸಿದೆ.

ಕೋವಿಡ್ ಕಾರಣದಿಂದಾಗಿ ಪ್ರತಿ ಮತಗಟ್ಟೆಯಲ್ಲಿ 1250 ಮಾತ್ರವೇ ಮತ ಚಲಾಯಿಸಬಹುದಾಗಿದೆ. ಇನ್ನು ಅಭ್ಯರ್ಥಿಗಳಿಗೆ ಆನ್ ಲೈನ್ ನಲ್ಲಿ ನಾಮಪತ್ರ ಸಲ್ಲಿಸುವ ಅವಕಾಶವನ್ನೂ ಆಯೋಗ ನೀಡಿದೆ.

ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ಮುಖ್ಯಾಂಶ :

* ಜನವರಿ 14ಕ್ಕೆ ಅಧಿಸೂಚನೆ ಪ್ರಕಟ
* ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಮತದಾನ
* ಫೆ. 10ಕ್ಕೆ ಮೊದಲ ಹಂತದ ಮತದಾನ
* ಪಂಜಾಬ, ಉತ್ತರಾಖಂಡ, ಗೋವಾ ರಾಜ್ಯಗಳಿಗೆ ಒಂದೇ ಹಂತದಲ್ಲಿ ಮತದಾನ
* ಫೆಬ್ರವರಿ 14: ಎರಡನೇ ಹಂತದ ಮತದಾನ
* ಫೆಬ್ರವರಿ 24: ಮೂರನೇ ಹಂತದ ಮತದಾನ
* ಮಾರ್ಚ 10ಕ್ಕೆ ಪಂಚ ರಾಜ್ಯಗಳ ಫಲಿತಾಂಶ

You might also like
Leave a comment