This is the title of the web page

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಮೇಲೆ ಈಗ ವಿದ್ಯುತ್ ಪ್ರಹಾರ

ಬೆಂಗಳೂರು, 4- ಅಗತ್ಯ ವಸ್ತುಗಳ ಭಾರಿ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಮೇಲೆ ಮತ್ತೊಂದು ಪ್ರಹಾರ ಮಾಡಲಾಗಿದ್ದು ರಾಜ್ಯದಲ್ಲಿ ವಿದ್ಯುತ್ ದರ ಮತ್ತೆ ಏರಿಕೆ ಮಾಡಲಾಗಿದೆ.

ಎಪ್ರಿಲ್‌ 1 ರಿಂದಲೇ ನೂತನ ದರ ಜಾರಿಗೆ ಬರಲಿದ್ದು ಒಟ್ಟಾರೆ ಸರಾಸರಿ 35 ಪೈಸೆಯಷ್ಟು ದರ ಹೆಚ್ಚಳವಾಗಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ಬೆಲೆ ಏರಿಕೆ ಕುರಿತು ಮಾಹಿತಿ ನೀಡಿದೆ.

2022-23ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ಆದಾಯ ಕೊರತೆ 2159.48 ಕೋಟಿ ರೂ. ಅಂತೆ. ಅದಕ್ಕೆ ದರ ಹೆಚ್ಚಳ ಅನಿವಾರ್ಯವಾಗಿದೆ. ಸದರಿ ಮೊತ್ತವು ಆರ್ಥಿಕ ವರ್ಷ 2020-21ರ ಕೊರತೆಯ ಮೊತ್ತ ರೂ. 1700.49 ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದೂ ಹೇಳಲಾಗಿದೆ.

ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗಳನ್ನು ಪರಿಗಣಿಸಿ ಆಯೋಗವು ಆರ್ಥಿಕ ವರ್ಷ 2023ಕ್ಕೆ ವಿದ್ಯುತ್ ಸರಬರಾಜು ಕಂಪನಿಗಳ 2159.00 ಕೋಟಿ ರೂಪಾಯಿಗಳ ಕಂದಾಯ ಕೊರತೆಯನ್ನು ಅನುಮೋದಿಸಿದೆ.
2159.00 ಕೋಟಿ ರೂಪಾಯಿಗಳ ಕೊರತೆಯನ್ನು ನೀಗಿಸುವ ಸಲುವಾಗಿ ಪ್ರತಿ ಯೂನಿಟ್‌ಗೆ 5 ಪೈಸೆಗಳಷ್ಟು ಇಂಧನ ಶುಲ್ಕಗಳ ಹಾಗೂ ಪ್ರತಿ ಎಚ್.ಪಿ/ ಕಿ. ವ್ಯಾ/ ಕೆ.ವಿ.ಎ.ಗೆ ರೂ.10 ರಿಂದ ರೂ. 30 ರವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಸಹ ಅನುಮೋದಿಸಲಾಗಿದೆ.
ಆರ್ಥಿಕ ವರ್ಷ 2023ಕ್ಕೆ ಒಟ್ಟಾರೆ ಸರಾಸರಿ ಹೆಚ್ಚಳ ಪ್ರತಿ ಯೂನಿಟ್‌ಗೆ 35 ಪೈಸೆಯಷ್ಟು ಆಗಿರುತ್ತದೆ.

ಹೆಸ್ಕಾಂ ಮತ್ತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಜೆಸ್ಕಾಂ, ಮೆಸ್ಕಾಂ, ಚೆಸ್ಕಾಂ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ 35 ಪೈಸೆ ದರ ಹೆಚ್ಚಳವಾಗಲಿದೆ. ಏಪ್ರಿಲ್ 1 ರಿಂದಲೇ ನೂತನ ದರ ಜಾರಿಗೆ ಬರಲಿದೆ.

You might also like
Leave a comment