Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Local News

ಬೆಳಗಾವಿ ಪಾಲಿಕೆಯಿಂದ ಒತ್ತುವರಿ ತೆರವು; ಸರ್ಕಾರದಿಂದ ಅನ್ಯಾಯ ಎಂಬ ಘೋಷಣೆ


ಬೆಳಗಾವಿ: ಬಿಗಿ ಪೊಲೀಸ್ ಭದ್ರತೆಯಲ್ಲಿ ನಗರದ ಗೋವಾವೇಸ್ ವೃತ್ತದಲ್ಲಿ ಮನೆಗಳು, ಅಂಗಡಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು‌.

ನಗರದ ಗೋವಾವೇಸ್ ವೃತ್ತದಲ್ಲಿ ಮಹಾನಗರಪಾಲಿಕೆಯ ಖಾಲಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ಐದಕ್ಕೂ ಅಧಿಕ ಮನೆಗಳು, ಗ್ಯಾರೇಜ್, ಗುಜರಿ ಅಂಗಡಿಗಳನ್ನು ತೆರವು ಮಾಡಲಾಯಿತು.

ಈ ವೇಳೆ ಕುಟುಂಬಸ್ಥರು, ಅಂಗಡಿ ಮಾಲೀಕರು, ಮಹಿಳೆಯರು ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಲ್ಲದೇ ಮನೆಯ ಮುಂಭಾಗದಲ್ಲಿ ಧರಣಿ ಕುಳಿತು ಕಣ್ಣೀರಿಡುತ್ತಿದ್ದರು.

ಆಗ ಪೊಲೀಸರು ಮತ್ತು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಯಾವುದೇ ಕಾರಣಕ್ಕೂ ತೆರವು ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಜನರು, ಬಿಜೆಪಿ ಸರ್ಕಾರ ಮುಸ್ಲಿಂರಿಗೆ ಅನ್ಯಾಯ ಮಾಡ್ತಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಘೋಷಣೆ ಕೂಗಿದ ಓರ್ವನನ್ನು ಶಹಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ಐದಕ್ಕೂ ಅಧಿಕ ಮನೆಗಳು, ಗ್ಯಾರೇಜ್, ಗುಜರಿ ಅಂಗಡಿ ತೆರವು ಕಾರ್ಯಾಚರಣೆ ಮಾಡಲಾಗಿದೆ.


A B Dharwadkar
the authorA B Dharwadkar

Leave a Reply