Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಇಂಜಿನೀಯರಿಂಗ ಪ್ರವೇಶ ದಿನಾಂಕ ನ.30 ರ ವರೆಗೆ ವಿಸ್ತರಣೆ


ಬೆಂಗಳೂರು, ೧೮- ಇಂಜಿನೀಯರಿಂಗ ಪ್ರವೇಶ ಬಯಸಿರುವ ಸಿಇಟಿ ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾವಕಾಶದ ದಿನಾಂಕವನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಈ ವಿಷಯ ತಿಳಿಸಿದ್ದು, ಈ ಮುನ್ನ ಎಐಸಿಟಿಇ ಇಂಜಿನಿಯರಿಂಗ್ ಕೋರ್ಸ ಪ್ರವೇಶಕ್ಕೆ ಅಕ್ಟೋಬರ 25 ಅಂತಿಮ ದಿನಾಂಕವಾಗಿ ನಿಗದಿ ಮಾಡಿತ್ತು. ಇದನ್ನು ವಿಸ್ತರಿಸಲು ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುಪ್ರೀಮ ಕೋರ್ಟ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ಇದನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದರಿಂದ ಒಂದು ತಿಂಗಳಿಗಿಂತ ಅಧಿಕ ಕಾಲಾವಕಾಶ ಸಿಕ್ಕಿರುವುದರಿಂದ ಕೌನ್ಸೆಲಿಂಗ್ ಸೇರಿದಂತೆ ಪ್ರವೇಶ ಪ್ರಕ್ರಿಯೆಗಳು ಸುಗಮವಾಗಿ ನಡೆಯಲಿದೆ ಎಂದು ಅಶ್ವತ್ಥ್ ನಾರಾಯಣ ಸ್ಪಷ್ಟಪಡಿಸಿದ್ದಾರೆ. ರಾಂಕಿಂಗ್ ನೀಡುವ ವಿಚಾರದಲ್ಲಿ ಕಳೆದ ವರ್ಷ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಹೈಕೋರ್ಟ ಮೆಟ್ಟಿಲೇರಿದ್ದ ಕಾರಣ ಸಿಇಟಿ ಪ್ರವೇಶ ಪ್ರಕ್ರಿಯೆ ವಿಳಂಬವಾಗಿತ್ತು. ಹೀಗಾಗಿ ಅಂತಿಮ ದಿನಾಂಕ ವಿಸ್ತರಿಸಲು ಸುಪ್ರೀಂ ಕೋರ್ಟಗೆ ಮನವಿ ಮಾಡಲಾಗಿತ್ತು.


Leave a Reply